Slide
Slide
Slide
previous arrow
next arrow

ನನ್ನ ಸಂಬಳ,ಉದ್ಯಮದ ಹಣ ಜನರಿಗಾಗಿ ವಿನಿಯೋಗ: ಸಚಿವ ವೈದ್ಯ

300x250 AD

ಭಟ್ಕಳ: ಇಲ್ಲಿನ ಬೈಲೂರು ಗ್ರಾಮ ಪಂಚಾಯತ ವ್ಯಾಪ್ತಿಯ ತೆಂಗಾರದ ಸಿದ್ದಿವಿನಾಯಕ ಸಭಾಭವನದಲ್ಲಿ ಜನರ ಬಳಿಗೆ ಮಂಕಾಳ ವೈದ್ಯರ ನಡಿಗೆ ಕಾರ್ಯಕ್ರಮವನ್ನು ಮಂಗಳವಾರದಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷ್ಣ ಭಂಡಾರಿ, ನಮ್ಮೂರಿನ ಮಣ್ಣಿನ ಮಗನಾಗಿ ಸಚಿವರಾದ ಮೇಲೆ ಇವರ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ಸರಕಾರದ ಪ್ರಮುಖ ಯೋಜನೆ ಮತ್ತು ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಯು ಕಾರ್ಯರೂಪಕ್ಕೆ ಬಂದಿದೆಯಾ ಎಂದು ಪರಿಶೀಲಿಸಲಿದ್ದಾರೆ. ಅವರು ಸಹ ಬೈಲೂರಿನವರಾದ್ದರಿಂದ ಅವರಿಗೆ ಇಲ್ಲಿನ ಸಮಸ್ಯೆ ಅದರ ಪರಿಹಾರದ ಬಗ್ಗೆ ಅರಿವಿದೆ. ಊರಿನ ರಸ್ತೆ ದುರಸ್ತಿ ಜೊತೆಗೆ ಅಗಲೀಕರಣದ ಬಗ್ಗೆ ನಮ್ಮ ಬೇಡಿಕೆಯಿದ್ದು ಅವೆಲ್ಲವನ್ನು ಪರಿಹರಿಸಲಿದ್ದಾರೆಂಬ ಭರವಸೆ ನಮಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಇದು ವಿನೂತನ ಕಾರ್ಯಕ್ರಮ ಆಗಿದೆ. ಚು‌ನಾವಣೆ ಪೂರ್ವದಲ್ಲಿ ಸಚಿವರ ಪ್ರಮುಖ ಆಶಯಗಳಲ್ಲಿ ಒಂದಾದ ಜನರ ಸಮಸ್ಯೆ ಪರಿಹಾರಕ್ಕೆ ಆಲೋಚಿಸಿದ ಕಾರ್ಯಕ್ರಮ ಇದಾಗಿದೆ. ಇವರಿಗೆ ಸೋಲು ಗೆಲುವು ಯಾವುದಿದ್ದರು ಸಹ ಅವರ ಸಮಾಜಮುಖಿ ಕಾರ್ಯ ಇಂದಿಗೂ ನಿಂತಿಲ್ಲ ಎಂದಿಗು ನಿಲ್ಲುವುದಿಲ್ಲ. ಸರಕಾರದ ಗ್ಯಾರೆಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆಯೇ ಎಂಬುದರ ಬಗ್ಗೆ ಜನರಿಂದಲೇ ಮಾಹಿತಿ ಪಡೆದುಕೊಳ್ಳಲಿದ್ದಾರೆ‌.

ಸಚಿವ ಮಂಕಾಳ ವೈದ್ಯ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಜನಜಾಗೃತಿ ಕಾರ್ಯಕ್ರಮದ ಮೂಲಕ ಪಂಚಾಯತ, ವಾರ್ಡ ಮನೆ ಮನೆಗೆ ಭೇಟಿ ನೀಡಿದ್ದೇನೆ. ಅದರಂತೆ ಜನರು ನನ್ನನ್ನು ಗೆಲ್ಲಿಸಿ ಶಾಸಕನಿಂದ ಸಚಿವ ಸ್ಥಾನದ ತನಕ ಗೆದ್ದು ಮತ್ತೆ ಜನರ ಸೇವೆಗೆ ಬಂದಿದ್ದೇನೆ. 6 ತಿಂಗಳ ಬಳಿಕ ಕ್ಷೇತ್ರದ ಜನರನ್ನು ಭೇಟಿ ಮಾಡುತ್ತೇನೆ ಎಂದಿದ್ದೇನೆ ಅದರಂತೆ ಬಂದಿದ್ದೇನೆ. ಇಡೀ ರಾಜ್ಯ ಭಟ್ಕಳವನ್ನು ನೋಡುವಂತೆ ಮತಗಳನ್ನು ನೀಡಿ ಗೆಲ್ಲಿಸಿದ್ದೀರಿ. 2005 ರಲ್ಲಿ ಜಿಲ್ಲಾ ಪಂಚಾಯತ ಸದಸ್ಯರನ್ನಾಗಿ 2010-11 ರಲ್ಲಿ ಜಾಲಿ ಜಿಲ್ಲಾ ಪಂಚಾಯತನಿಂದ ಗೆಲ್ಲಿಸಿದ್ದೀರಿ. ಬೈಲೂರಿನ ಜನರು ನನ್ನ ಗೆಲುವಿಗೆ ರಾಜಕೀಯ ಶಕ್ತಿ ನೀಡಿದೆ. ಶಾಸಕನಾಗಿದ್ದರು ಸಹ ಮಂತ್ರಿಯ ರೀತಿಯಲ್ಲಿ ಜನರ ಕೆಲಸ ಮಾಡಿದ್ದೇನೆ. ಅಂದು 5 ಗ್ಯಾರೆಂಟಿ ಭರವಸೆ ನೀಡಿದ್ದೇನೆ.‌ ಅದರಂತೆ ಸರಕಾರ ಮತ್ತು ಸಚಿವ ಶಾಸಕನಾಗಿ ನಿಮಗೆ ಸಿಗಬೇಕಾದ ಯೋಜನೆ ಫಲ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಇರುವ ಬಸ್ ಇಲ್ಲದ ಹಾಗೆ ಮಾಡಿದ್ದನ್ನು ಈಗ ಮತ್ತೆ ಪುನಃ ಎರಡು ಬಸ್ ಆರಂಭಿಸಿದ್ದೇವೆ. ಜನರ ಕಷ್ಟ ನನಗೆ ಅರ್ಥವಾದ ಮೇಲೆ ಅಧಿಕಾರಿಗಳಿಗೆ ಸೂಚಿಸಿ‌ ಕೆಲಸ ಮಾಡಿಸುತ್ತೇನೆ. ಸಾಮಾನ್ಯ ಜನರಿಗೆ ನಾನು ಸಿಗದಿದ್ದರು ಎಲ್ಲಾ ಕಚೇರಿಯಲ್ಲಿ ನನ್ನ ರೀತಿಯ ಕೆಲಸಗಾರರು ಇದ್ದಾರೆ. ಸಮಸ್ಯೆಗಳ ಮೌಲ್ಯ ಅರಿತು ಅವು ನನ್ನ ಬಳಿ ಬರಲಿದೆ.

ಶಿಕ್ಷಣಕ್ಕೆ ಪ್ರಾಮುಖ್ಯತೆ ನನ್ನದು. ಇದರಿಂದ ಅಭಿವೃದ್ಧಿ ಸಾಧ್ಯ. ಸಂಸ್ಕಾರ ಸಹ ಅತೀ ಮುಖ್ಯ. 70 ಸಾವಿರ ಕೋಟಿ ಅಕ್ಕಿಗೆ ಬದಲಿಗೆ ಹಣ ನೀಡುತ್ತಿದ್ದೇವೆ. ಅಭಿವೃದ್ಧಿಗೂ ಸಹ ಪ್ರಾಮುಖ್ಯತೆ ನೀಡುವುದರ ಗಮನವಿದೆ. 2000 ಸಾವಿರ ಕೋಟಿ ಕ್ಷೇತ್ರದ ಜನರಿಗೆ ನೀಡಿದ್ದೇನೆ. ನನ್ನ ಮುಂದಿನ ಗುರಿ ಜಿಲ್ಲೆಯಲ್ಲಿ 10 ಸಾವಿರ ಕೋಟಿ ಹಣ ತಂದು ಮುಖ್ಯಮಂತ್ರಿ ಅವರನ್ನು ಕರೆಯಿಸಿ ಉದ್ಘಾಟಿಸಲಿದ್ದೇನೆ. 2013 ರ ಅವಧಿಯಲ್ಲಿ ಮೆಡಿಕಲ್ ಕಾಲೇಜ್ ತಂದಿದ್ದೇವೆ. ಜಿಲ್ಲೆಯ ಎಲ್ಲಾ ಶಾಸಕರು ಕೆಲಸ ಮಾಡಿದ್ದೇವೆ. ಸರಕಾರ ಮಾಡಿಲ್ಲವೆಂದರೆ ನಾನೇ ಮಲ್ಟಿ ಸ್ಪೆಷಾಲಿಟಿ ಮಾಡಲಿದ್ದೇನೆ ನನ್ನ ಮಾತಿಗೆ ನಾನು ಈಗಲು ಬದ್ಧ.

300x250 AD

ಹಿಂದುತ್ವದ ಬಗ್ಗೆ ಮಾತನಾಡಲು ಮಠಾಧೀಶರಿಗೆ ಹಕ್ಕಿದೆ ಹೊರತು ರಾಜಕಾರಣಿಗಳಿಗಿಲ್ಲ. ಜನರಿಗೆ ಸಂಸ್ಕಾರ ನೀಡುವ ಕೆಲಸ ಧರ್ಮ ಜಾಗೃತಿ ಮಾರ್ಗದರ್ಶನ ಅವರಿಂದ ಪಡೆಯಬೇಕು. ರಾಮನ ಭಕ್ತ ದೇವರ ಭಕ್ತ ಎಂದ ಅವರು ಶಾಸಕರಿಂದ ಆಗದೇ ಇರುವ ಕೆಲಸ ಯಾವುದು ಇಲ್ಲ. ಆಗದೇ ಇದ್ದಲ್ಲಿ ಅವರು ಶಾಸಕರೇ ಅಲ್ಲ. ನಿಮ್ಮ ಆಸ್ತಿ ಮಂಕಾಳ ವೈದ್ಯ ಎನ್ನುವುದನ್ನು ಮರೆಯದಿರಿ. 24 ಗಂಟೆ ಜಿಲ್ಲೆ ಕ್ಷೇತ್ರದ ಜನರ ಕೆಲಸ ಮಾಡಿದ್ದೇನೆ. ಮಾಡುತ್ತಿದ್ದೇನೆ ಮಾಡಲಿದ್ದೇನೆ ಮುಂದೆ. ಪ್ರತಿಯೊಬ್ಬರ ಮನೆಗೆ ವಿದ್ಯುತ್, ನೀರು ವಸತಿ ಇರಲೇಬೇಕು ಇದು ನನ್ನ ಗುರಿ. ಇಲ್ಲಿನ ಸ್ಥಳೀಯ ಸರಸ್ವತಿ‌ ನದಿಯ ಅಭಿವೃದ್ಧಿ ಸಹ ಮಾಡಲಿದ್ದೇನೆ. ನನ್ನ ಸಂಬಳ ನನ್ನ ಉದ್ಯಮದ ಹಣವನ್ನು ಸಹ ನಾನು ಜನರಿಗೆ ಸಹ ವಿನಿಯೋಗಿಸಲಿದ್ದೇನೆ. ಚುನಾವಣೆಯಲ್ಲಿ ನನಗೆ ಸಹಾಯ ಮಾಡಿದ್ದೀರಿ ಈಗ ನಾನು ನಿಮ್ಮ ಕೆಲಸ ಮಾಡಲು ನಾನು ಬಂದಿದ್ದೇನೆ ಎಂದರು.

ನಂತರ ಗ್ರಾಮಸ್ಥರು ಕೆಲ ಅಹವಾಲನ್ನು ಮುಂದಿಟ್ಟಿದ್ದು ಪಂಚಾಯತ ಭಾಗದಲ್ಲಿ ದಾರಿ ದೀಪ, ರಸ್ತೆ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘದ ಬೇಡಿಕೆ ಇಟ್ಟರು. ಮಾರ್ಕಂಡೇಶ್ವರ ಕುಂಬಾರಕೇರಿ ದಾರಿ ಅವಶ್ಯ ಕತೆ ಇದೆ‌ ಸತ್ತರೆ ಅವರನ್ನು ಕರೆ ತರಲು ದಾರಿ ಇಲ್ಲ ಎಂದಿದ್ದು ಇದಕ್ಕೆ ರಸ್ತೆ ಶೀಘ್ರವಾಗಿ ಆರಂಭಿಸುತ್ತೇನೆ ಎಂದು ಸಚಿವ ವೈದ್ಯ ಭರವಸೆ ನೀಡಿದರು. ಇನ್ನು ಸಮುದ್ರ ತೀರದಲ್ಲಿ ವಾಸವಿದ್ದ ಜನರಿಗೆ ಹಕ್ಕು ಪತ್ರ ನೀಡಿ ಅವರಿಗೆ ಶೌಚಾಲಯದ ವ್ಯವಸ್ಥೆಗೆ ಬೇಡಿಕೆಗೆ ಸಚಿವರು ಮನೆ ಮತ್ತು ಶೌಚಾಲಯರ ವ್ಯವಸ್ಥೆಗೆ ಭರವಸೆ ನೀಡಿದರು ‌

ಅರಣ್ಯ ಅತಿಕ್ರಮಣದ ವಿಚಾರದಲ್ಲಿ ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದ ತನಕವು ಯಾವುದೇ ಸಭೆ ಮಾಡಿಲ್ಲ. ಅಕ್ರಮ ಸಕ್ರಮದ ಸಭೆ ರಾಜ್ಯ ಮಟ್ಟದಲ್ಲಿ ಆದ ಮೇಲೆ ಅದರ ಮುಂದಿನ ತೀರ್ಮಾನ. ನಾಲ್ಕು ಹಂತದ ಅತಿಕ್ರಮಣವನ್ನು ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು. ಪ್ರತಿ ಗ್ರಾಮದಲ್ಲಿ ಮೂಲಭುತ ವ್ಯವಸ್ಥೆ ಇರುವ ರುದ್ರಭೂಮಿ ಮಾಡುವ ಕಾರ್ಯ ಮತ್ತು ನಮ್ಮೆಲ್ಲರ ಮನೆ ನಮ್ಮ ರುದ್ರಭೂಮಿ ಗ್ರಾಮಸ್ಥರು ಇದಕ್ಕೆ ಸಹಕಾರ ಮಾಡಬೇಕು ಎಂದು ಸಚಿವ ವೈದ್ಯ ಹೇಳಿದರು.

ಹಿರಿಯ ಗ್ರಾಮಸ್ಥ ಮಾದೇವ ನಾಯ್ಕ ಮಾತನಾಡಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಸಹಾಯ ಮಾಡಬೇಕು ಎಂದಿದ್ದು ಇದಕ್ಕೆ ಹೊನ್ನಾವರದಿಂದ ಮುಂಡಳ್ಳಿ ತನಕ 100 ಕೋಟಿ ಸಮುದ್ರ ತೀರದಲ್ಲಿ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಮಾಡಿದ್ದೇವೆ. ಇನ್ನು ಸಾಕಷ್ಟು ಕೆಲಸ ಮಾಡಲು ಯೋಜನೆ ರೂಪಿಸಲಾಗಿದೆ. ನನ್ನೂರಿನವರೇ ನನ್ನೂರಿನಲ್ಲಿಯೇ ಉದ್ಯೋಗ ಮಾಡಬೇಕು. ಜನರು ನನ್ನ ಬಳಿ ಬಂದರೆ ಅವರ ಸಮಸ್ಯೆ ನನಗೆ ತಿಳಿಯುತ್ತದೆ. ಅವರಿಗೆ ಎಲ್ಲಾ ರೀತಿಯ ಸಹಕಾರಕ್ಕು ಸಿದ್ದನಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬೈಲುರು ಪಂಚಾಯತ ಅಧ್ಯಕ್ಷ ಕೃಷ್ಣ ನಾಯ್ಕ, ಎ.ಪಿ.ಎಮ್.ಸಿ. ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top