ಯಲ್ಲಾಪುರ: ಕುಂದರಗಿ ಬಾಯ್ಸ್ ವತಿಯಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಹವ್ಯಕ 30 ಯಾರ್ಡ್ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪಂದ್ಯದಲ್ಲಿ 16 ತಂಡಗಳು ಭಾಗವಹಿಸಿದ್ದು, ಸೆಮಿಪೈನಲ್’ನಲ್ಲಿ ಟೀಮ್ ಶ್ರೀ, ಟೀಮ್ ಅಶ್ವಮೇಧ, ಪಿ.ಸಿ.ಸಿ. ನಿಸ್ರಾಣಿ ಹಾಗೂ ಐಕೋನಿಕ್ಸ ಹೇರೂರು ತಂಡವು ಸೆಣಸಿ, ಅಂತಿಮ ಹಣಾಹಣಿಯಲ್ಲಿ ಟೀಮ್ ಶ್ರೀ ಹಾಗೂ ಐಕಾನಿಕ್ಸ ಹೇರೂರ್ ತಂಡದ ನಡುವಿನ ಪಂದ್ಯದಲ್ಲಿ ‘ಟೀಮ್ ಶ್ರೀ’ ಪ್ರಥಮ ವರ್ಷದ ಕೆ.ಎಚ್.ಪಿ.ಎಲ್.ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗಿದ್ದು, ಬೆಸ್ಟ್ ಆಲ್ ರೌಂಡರ್ ಪ್ರಶಾಂತ, ಬೆಸ್ಟ್ ಬೌಲರ್ ಪ್ರಮೋದ, ಬೆಸ್ಟ್ ಬ್ಯಾಟ್ಸಮನ್ ನಾಗರಾಜ, ಬೆಸ್ಟ್ ಕೀಪರ್ ರಾಘು ಮಾಸ್ತರ, ಬೆಸ್ಟ್ ಟೀಮ್ ಮಲ್ಲಿಕಾರ್ಜುನ ಇವರಿಗೆ ಪ್ರಶಸ್ತಿಗಳಿಗೆ ಭಾಜನರಾದರು. ಪಂದ್ಯಾವಳಿಯ ವೇಳೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಉಪಸ್ಥಿತರಿದ್ದು, ಹವ್ಯಕರ ಇಂದಿನ ಜೀವನದ ಬಗ್ಗೆ ಹಾಗೂ ಹಳ್ಳಿಗಳ ವಾಸ್ತವ ಸ್ಥಿತಿಗತಿಗಳ ಕುರಿತು ವಿವರಿಸಿ, ಪಂದ್ಯಾವಳಿ ಆಯೋಜಿಸಿದ್ದು ಹವ್ಯಕರು ಒಂದೆಡೆ ಸೇರಲು ಸದಾವಕಾಶವಾಗಿದೆ ಎಂದು ತಿಳಿಸಿ ಶುಭಾಶಯ ಕೋರಿದರು. ಅದೇ ರೀತಿ ಸಮಾರೋಪ ಸಮಾರಂಭದಲ್ಲಿ ಗ್ರಾಮ್ ಪಂಚಾಯತ್ ಸದಸ್ಯಾರಾದ ಪ್ರಸನ್ನ ಭಟ್ ಹಿತ್ಲಳ್ಳಿ ಇವರನ್ನು ಹಳೆಯ ಆಟಗಾರರೆಂದು ಸನ್ಮಾನಿಸಿ ಗೌರವಿಸಲಾಯತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತದ ಸದಸ್ಯರಾದ ರಾಮಕೃಷ್ಣ ಹೆಗಡೆ, ರೋಟರಿ ಕಾರ್ಯದರ್ಶಿ ಗಣಪತಿ ಹೆಗಡೆ, ಸಚೀನ್ ದೀಕ್ಷೀತ್, ಮಂಜುನಾಥ ಹೆಗಡೆ ಕೊಪ್ಪೆಸರ (ಕುಂದರಗಿ) ಮಾದೇವ ಹೆಗಡೆ, ಚಂದ್ರಶೇಖರ್ ಭಟ್ ಅಡಕೆಪಾಲ್ ನಿತಿನ್ ಹೆಗಡೆ ದತ್ತಾತ್ರೇಯ ಹೆಗಡೆ ಹಾಗೂ ಊರ ನಾಗರಿಕರು ಹಾಜರಿದ್ದರು. ಭಾಗವಹಿಸಿದ 16 ತಂಡಗಳಿಗೂ,ಪ್ರಥಮ ವರ್ಷದ ಪ್ರಶಸ್ತಿ ಬಾಚಿಕೊಂಡ ಟೀಮ್ ಶ್ರೀ ಹಾಗೂ ರನ್ನರ ಅಪ್ ತಂಡವಾದ ಐಕೊನಿಕ್ಸ ಹೇರೂರ್ ತಂಡದವರಿಗೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲಾಯಿತು. ರಾಘು ಕುಂದರಗಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.