
ಶಿರಸಿ: ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಯಕ್ಷಶಾಲ್ಮಲಾ ಸ್ವರ್ಣವಲ್ಲೀ ಇವರಿಂದ ‘ಶ್ರೀರಾಮ ಭಕ್ತಿ ಜಾಗರಣ ತಾಳಮದ್ದಳೆ’ ಜ.22, ಸೋಮವಾರದಂದು ರಾತ್ರಿ 9 ರಿಂದ ಸ್ವರ್ಣವಲ್ಲೀ ಸುಧರ್ಮಾ ಸಭಾಭವನದಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಸತೀಶ ಹೆಗಡೆ ದಂಟಕಲ್, ಅನಂತ ದಂತಳಿಕೆ, ನರಸಿಂಹ ಭಟ್ಟ ಹಂಡ್ರಮನೆ, ಶ್ರೀಪತಿ ಹೆಗಡೆ ಕಂಚಿಮನೆ, ಕೃಷ್ಣ ಹೆಗಡೆ ಜೋಗದಮನೆ, ವಿಘ್ನೇಶ್ವರ ಕೆಸರಕೊಪ್ಪ, ಪ್ರಶಾಂತ ಕೈಗಡಿ ಹಾಗೂ ಮುಮ್ಮೇಳದಲ್ಲಿ ಎಮ್.ಎನ್. ಹೆಗಡೆ ಹಳವಳ್ಳಿ, ಆರ್.ಎಸ್. ಹೆಗಡೆ ಭೈರುಂಬೆ, ವಿದ್ವಾನ್ ನರಸಿಂಹ ಭಟ್ಟ ತಾರೇಮಕ್ಕಿ, ಡಿ. ಕೆ. ಗಾಂವ್ಕರ್ ಯಲ್ಲಾಪುರ, ವಿದ್ವಾನ್ ಬಾಲಚಂದ್ರ ಭಟ್ ಕರಸುಳ್ಳಿ, ಮಹೇಶ ಭಟ್ಟ ಉಮ್ಮಚಗಿ, ಕರುಣಾಕರ ಹೆಗಡೆ ಕಲ್ಲಳ್ಳಿ, ಮಂಜುನಾಥ ಗೋರ್ಮನೆ,ಗಣಪತಿ ಗುಂಜಗೋಡ, ಸುಬ್ರಾಯ ಹೆಗಡೆ ಕೆರೆಕೊಪ್ಪ, ಜಿ. ಜಿ. ಹೆಗಡೆ ಕನೇನಳ್ಳಿ, ಪದ್ಮನಾಭ ಅರೇಕಟ್ಟಾ, ಶ್ರೀನಿವಾಸ ಮತ್ತೀಘಟ್ಟ, ಭಾಸ್ಕರ ಗಾಂವ್ಕರ್ ಬಿದ್ರೆಮನೆ, ಶ್ರೀಪಾದ ಭಟ್ಟ ಭಟ್ರಕೇರಿ, ಸದಾಶಿವ ಮಲವಳ್ಳಿ, ಪ್ರವೀಣ ಹೆಗಡೆ ಮಣ್ಮನೆ ಕಾಣಿಸಿಕೊಳ್ಳಲಿದ್ದಾರೆ.