ಶಿರಸಿ: ಅಯೋಧ್ಯಾ ಶ್ರೀರಾಮ ಮಂದಿರ ಲೋಕಾರ್ಪಣಾ ಸಂಭ್ರಮದ ದಿನವಾದ ಜ.22 ಸೋಮವಾರ ಬೆಳಿಗ್ಗೆ 9:30 ರಿಂದ ಆದರ್ಶನಗರದ ಶ್ರೀ ವರದಮೂರ್ತಿ ದೇವಸ್ಥಾನದಲ್ಲಿ ವಿಶೇಷವಾದ ಶ್ರೀರಾಮ ಕಲ್ಪೋಕ್ತ ಪೂಜೆ, ಗಣಹವನ, ಪೂರ್ಣಾಹುತಿ ಮತ್ತು ಮಹಾಪೂಜೆ ಹಾಗೂ ಸಾಮೂಹಿಕ ಭಜನಾ ಕಾರ್ಯಕ್ರಮ ಇರುತ್ತದೆ. ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜೆಗೆ ಪಾಲ್ಗೊಂಡು ಶ್ರೀರಾಮನ ಅನ್ನಪ್ರಸಾದವನ್ನು ಸ್ವೀಕಸಬೇಕೆಂದು ಮತ್ತು ಅದೇ ದಿನ ಸಂಜೆ 6-30 ಗಂಟೆಗೆ ಶ್ರೀರಾಮ ದೇವರ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀರಾಮ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆದರ್ಶನಗರದ ಶ್ರೀ ವರದಮೂರ್ತಿ ದೇವಸ್ಥಾನ ವತಿಯಿಂದ ಈ ಕಾರ್ಯಕ್ರಮದ ಮೇಲ್ವಿಚಾರಕರಾದ ವಿನಯ ಹೆಗಡೆ ಕೋರಿದ್ದಾರೆ.