ಶಿರಸಿ: ಅಯೋಧ್ಯಾ ಶ್ರೀರಾಮ ಮಂದಿರ ಲೋಕಾರ್ಪಣಾ ದಿನದಂದು ಜ.22 ಸೋಮವಾರ ಬೆಳಿಗ್ಗೆ 9:30 ರಿಂದ ಚಿಪಗಿ ಗ್ರಾಮದ ನಾರಾಯಣ ಗುರು ನಗರ ಶ್ರೀ ಅಭಯ ವಿನಾಯಕ ದೇವಸ್ಥಾನದಲ್ಲಿ ವಿಶೇಷವಾದ ಶ್ರೀರಾಮ ಕಲ್ಪೋಕ್ತ ಪೂಜೆ, ಶ್ರೀರಾಮನ ಅಷ್ಟೋತ್ತರ ಹಾಗೂ ಸಾಮೂಹಿಕ ಭಜನಾ ಕಾರ್ಯಕ್ರಮ ಇರುತ್ತದೆ. ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜೆಗೆ ಪಾಲ್ಗೊಂಡು ಶ್ರೀರಾಮನ ಅನ್ನಪ್ರಸಾದವನ್ನು ಸ್ವೀಕಸಬೇಕೆಂದು ಮತ್ತು ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀರಾಮೋತ್ಸವ ಸಮಿತಿ ಚಿಪಗಿ ಪರವಾಗಿ ಸಮಿತಿಯ ಅಧ್ಯಕ್ಷರಾದ ನವೀನ ಭುಜಂಗ ಶೆಟ್ಟಿ ಕೇಳಿಕೊಂಡಿರುತ್ತಾರೆ.