Slide
Slide
Slide
previous arrow
next arrow

ಶಂಕರಮಠದಲ್ಲಿ ಪಂ.ಹಾಸಣಗಿ ಗಣಪತಿ ಭಟ್’ಗೆ ಸನ್ಮಾನ

300x250 AD

ಸಿದ್ದಾಪುರ : ಖ್ಯಾತ ಸಂಗೀತ ವಿದ್ವಾಂಸರಾಗಿರುವ ಪಂಡಿತ ಹಾಸಣಗಿ ಗಣಪತಿ ಭಟ್ಟ ಅವರ ಸೇವೆ, ಸಾಹಿತ್ಯಕ್ಷೇತ್ರದಲ್ಲಿ ಅಪಾರವಾಗಿದೆ. ಬಾಲ್ಯದಿಂದಲೂ ಅವರಿಗೆ ಸಂಗೀತದಲ್ಲಿ ಆಸಕ್ತಿ ಇತ್ತು. ಅದರಲ್ಲಿಯೇ ಸಾಧನೆ ಮಾಡಿದರು. ಇಂದು ಅವರು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿದ್ದು ಅವರಿಗೆ ಇತ್ತೀಚೆಗೆ ಮಧ್ಯಪ್ರದೇಶ ಸರಕಾರ ತಾನಸೇನ ಪ್ರಶಸ್ತಿ ನೀಡಿ ಗೌರವಿಸಿದೆ. ಅದಕ್ಕಾಗಿ ಅವರನ್ನು ಸಿದ್ದಾಪುರ ಶಂಕರ ಮಠದಲ್ಲಿ ಟಿ.ಎಂ.ಎಸ್. ಸಿದ್ದಾಪುರ ಇದರ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ, ಟಿ.ಎಂ.ಎಸ್. ನಿರ್ದೇಶಕ ಸುಬ್ರಹ್ಮಣ್ಯ ಚಟ್ನಳ್ಳಿ, ಸಾಹಿತಿಗಳಾಗಿರುವ ಜಿ.ಜಿ. ಹೆಗಡೆ ಬಾಳಗೋಡ, ತಮ್ಮಣ್ಣ ಬೀಗಾರ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ. ಪಾಟೀಲ ಕಾರ್ಯದರ್ಶಿ, ಕುಮಾರ ಗೌಡರ್ ಹೊಸೂರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್ ಹೆಗ್ಗೋಡ್ಮನೆ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆ, ಟಿ.ಎಂ.ಎಸ್. ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ ಮುಂತಾದವರು ಉಪಸ್ಥಿತರಿದ್ದು ಸನ್ಮಾನಿಸಿದರು.

300x250 AD
Share This
300x250 AD
300x250 AD
300x250 AD
Back to top