ಸಿದ್ದಾಪುರ: ತಾಲೂಕಿನ ಐಸೂರು ಗೌರಿಶಂಕರ ದೇವಾಲಯದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ದೇಶದಾದ್ಯಂತ ಎಲ್ಲ ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ತಾಲೂಕು ಬಿಜೆಪಿ ಘಟಕ, ದೇವಸ್ಥಾನ ಕಮೀಟಿ ಹಾಗೂ ನಾಗರಿಕರು ಬುಧವಾರ ಸ್ವಚ್ಛತಾಕಾರ್ಯ ನಡೆಸಿದರು. ಎಂ.ಎನ್.ಹೆಗಡೆ, ರಾಘವೇಂದ್ರ ಶಾಸ್ತ್ರೀ, ಕೃಷ್ಣಮೂರ್ತಿ ನಾಯ್ಕ, ತೋಟಪ್ಪ ನಾಯ್ಕ, ಮಂಜುನಾಥ ಹೆಗಡೆ ಇತರರಿದ್ದರು.