ಸಿದ್ದಾಪುರ: ಇಲ್ಲಿನ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೋವರ್ಸ್ ಸ್ಕೌಟ್ಸ್ ಮತ್ತು ರೇಂಜರ್ಸ್ ಹಾಗೂ ಯುವರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭವು ಜ.16, ಮಂಗಳವಾರದಂದು ನಡೆಯಿತು. ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಾದ ಭಾವನ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು. ಪ್ರಾಸ್ತಾವಿಕ ನುಡಿಯ ಮೂಲಕ ಉಪನ್ಯಾಸಕ ಈಶ್ವರ್ ಬಿ.ನಾಯ್ಕ ಕಾರ್ಯಕ್ರಮದ ಪ್ರಸ್ತುತತೆಯನ್ನು ವಿವರಿಸುವುದರೊಂದಿಗೆ ಎಲ್ಲರನ್ನುಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ವಿ.ಎಂ. ಭಟ್ ಹಾಗೂ ವೇದಿಕೆ ಮೇಲಿರುವ ಗಣ್ಯರು ನೆರವೇರಿಸಿದರು. ನಂತರ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಗುತ್ಯಪ್ಪ,ಆರ್. ಮುಖ್ಯ ಅತಿಥಿಗಳಾದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಎಂ. ಭಟ್, ಇವರನ್ನು ಪರಿಚಯಿಸಿದರು. ನಂತರ ಮುಖ್ಯ ಅತಿಥಿಗಳಾದ ವಿ.ಎಂ. ಭಟ್ ವಿದ್ಯಾರ್ಥಿಗಳ ಜೀವನದಲ್ಲಿ ಸಹಪಠ್ಯ ಚಟುವಟಿಕೆಗಳ ಪಾತ್ರ ಹಾಗೂ ಯುವ ಜನತೆ ಸಾಗಬೇಕಾದ ಮಾರ್ಗ, ಗುರಿ ಉದ್ದೇಶಗಳ ಬಗೆಗೆ ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು. ನಂತರ ಕಾಲೇಜಿನಲ್ಲಿ ಗ್ರಂಥಾಲಯದ ವತಿಯಿಂದ ನಡೆಸಲಾದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸಿ ಪತ್ರ ವಿತರಿಸಲಾಯಿತು. ನಂತರ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸತೀಶ್ಎನ್.ನಾಯ್ಕ ಅಧ್ಯಕ್ಷೀಯನುಡಿಗಳನ್ನಾಡಿದರು. ಅಂತಿಮವಾಗಿ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಲೋಹಿತ್ ನಾಯ್ಕ ಎಲ್ಲರನ್ನು ವಂದಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿಯಾದ ಮೇಘನಾ .ಎಸ್. ನಾಯ್ಕ್ ನಿರೂಪಿಸಿದರು. ಕಾರ್ಯಕ್ರಮದಲ್ಲಿಎಲ್ಲಾ ವಿಭಾಗದ ಸಂಚಾಲಕರು ಕಾಲೇಜಿನ ಬೋಧಕರು, ಬೊಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.