ಯಲ್ಲಾಪುರ : ‘ಸ್ವಾಮಿ ವಿವೇಕಾನಂದರ ಪ್ರೇರಣಾದಾಯಿ ಸಂದೇಶಗಳು, ಆದರ್ಶಗಳು ಜಗತ್ತೇ ಪಾಲಿಸುವಂತದ್ದಾಗಿದೆ. ವಿವೇಕ ಮತ್ತು ಆನಂದವನ್ನು ಜಗತ್ತಿಗೇ ಸಾರಿದ ಮಹಾ ಪುರುಷ ಸ್ವಾಮಿ ವಿವೇಕಾನಂದರು’ ಎಂದು ಶ್ರೀಪಾದ ಮೆಣಸುಮನೆ ಹೇಳಿದರು.
ಪಟ್ಟಣದ ಎಪಿಎಂಸಿಯ ಅಡಿಕೆ ಭವನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ‘ಯುವ ದಿನಾಚರಣೆ’ ಅಂಗವಾಗಿ ಎಲ್.ಎಸ್.ಎಂ.ಪಿ. ಮತ್ತು ಮಲೆನಾಡು ಕೃಷಿ ಅಭಿವೃದ್ಧಿ ಸಂಘ,ಬಿಜೆಪಿ ಯುವ ಮೋರ್ಚಾ ಸಹಕಾರದೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಮ್ಮಿಕೊಂಡಿದ್ದ ವಿವೇಕಾನಂದ ಜಯಂತಿ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ, ಸ್ವಾಮಿ ವಿವೇಕಾನಂದರ ಕುರಿತು ಅವರು ಮಾತನಾಡಿದರು. ದೇಶದಲ್ಲಿ ಮನೆ ಮಾಡಿದ್ದ ದೀನ ದಲಿತರ, ಜಾತಿ ವ್ಯವಸ್ಥೆ, ಗೊಡ್ಡು ಸಂಪ್ರದಾಯವನ್ನು ತೊಡೆದು ಹಾಕಲು ವೀರ ಸನ್ಯಾಸತ್ವದ ಹೊಸತನವನ್ನು ಹುಟ್ಟು ಹಾಕುವ ಮೂಲಕ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದರು ಎಂದರು.
ಶಿರಸಿ ವಿಭಾಗ ಕಾರ್ಯಕಾರಿಣಿ, ಗಣಪತಿ ಹಿರೇಸರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಲೆನಾಡು ಕೃಷಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಎಲ್.ಎಸ್.ಎಂ.ಪಿ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್.ಹೆಗಡೆ ವೇದಿಕೆಯಲ್ಲಿದ್ದರು. ಮಹಾಬಲೇಶ್ವರ ಭಟ್ಟ ಮಾಗೋಡು. ವೈಯಕ್ತಿಕ ಗೀತೆ ಹಾಡಿದರು. ರಾಷ್ಟ್ರೋತ್ಥಾನ ರಕ್ತನಿಧಿ ಹುಬ್ಬಳ್ಳಿ. ಡಾ. ದೀಪಾ ಭೋಮೋಜಿ, ಲ್ಯಾಬ್ ಟೆಕ್ನೀಷಿಯನ್ ಬಸವರಾಜ ರೆಡ್ಡೆರ್, ರೇಷ್ಮಾ ಜಿ. ವಿನಾಯಕ ದೇಶಪಾಂಡೆ, ಸುಮನ ಉಪ್ಪಾರ, ಕುಮಾರ ಪೂಜಾರ, ಫಕಿರೇಷ ದೇವನೂರು, ಸಿದ್ದು ಅಂಗಡಿ ರಕ್ತ ಸಂಗ್ರಹಿಸಿದರು. ಶಿಬಿರದಲ್ಲಿ 65 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಸ್ವಾಗತಿಸಿ ವಂದಿಸಿದರು. ಸ್ವಯಂ ಸೇವಕ ರಾಮಕೃಷ್ಣ ಕವಡಿಕೇರಿ ನಿರೂಪಿಸಿದರು.