Slide
Slide
Slide
previous arrow
next arrow

ಮಕರ ಸಂಕ್ರಾಂತಿ: ಜ.15ಕ್ಕೆ ಕವಿಗೋಷ್ಠಿ, ತಾಳಮದ್ದಲೆ

300x250 AD

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಿರಿ ಕಲಾ ಬಳಗ ಅಣಲಗಾರ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಆಶ್ರಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸನ್ಮಾನ, ಕವಿಗೋಷ್ಠಿ ಹಾಗೂ ತಾಳಮದ್ದಲೆ ಕಾರ್ಯಕ್ರಮ ಜ.15 ರಂದು ಸಂಜೆ 4 ಕ್ಕೆ ನಡೆಯಲಿದೆ.

ಕಾರ್ಯಕ್ರಮವನ್ನು ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಅಧ್ಯಾಪಕ ಡಾ.ಮಹೇಶ ಭಟ್ಟ ಇಡಗುಂದಿ ಉದ್ಘಾಟಿಸಲಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ಟ ಬಿದ್ರೆಪಾಲ ಅಧ್ಯಕ್ಷತೆ ವಹಿಸುವರು. ಹಿರಿಯ ಕಲಾವಿದರಾದ ಸುಬ್ರಾಯ ಭಾಗ್ವತ ಶೇಡಿಜಡ್ಡಿ, ವೆಂಕಟರಮಣ ಭಾಗ್ವತ ಹಶಿನಮನೆ, ಗಣಪತಿ ಭಟ್ಟ ತಟ್ಟಿಗದ್ದೆ ಹಾಗೂ ನರಸಿಂಹ ಭಟ್ಟ ಕುಂಕಿಮನೆ ಅವರನ್ನು ಸನ್ಮಾನಿಸಲಾಗುವುದು. ಕವಿಗಳಾದ ಸುಬ್ರಾಯ ಬಿದ್ರೆಮನೆ, ವಿ.ಜಿ.ಗಾಂವ್ಕರ ಉಪಸ್ಥಿತರಿರುವರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಅಧ್ಯಕ್ಷ ಗಣಪತಿ ಕಂಚಿಪಾಲ ವಹಿಸುವರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ ಉಪಸ್ಥಿತರಿರುವರು. ಹೇಮಾವತಿ ಭಟ್ಟ, ಕೃಷ್ಣ ಭಟ್ಟ ನಾಯಕನಕೆರೆ, ಸುಬ್ರಾಯ ಬಿದ್ರೆಮನೆ, ಮಂಗಲಾ ಭಾಗ್ವತ, ಶರಾವತಿ ಹೆಗಡೆ, ವಿಶ್ವೇಶ್ವರ ಗಾಂವ್ಕರ, ಸೀತಾ ಹೆಗಡೆ, ಜಿ.ಎನ್.ಭಟ್ಟ, ಸರೋಜಾ ಭಟ್ಟ, ಶ್ರೀಧರ ಭಟ್ಟ ಅಣಲಗಾರ, ಶ್ರೀಲತಾ ಹೆಗಡೆ, ಮಹಾಬಲೇಶ್ವರ ಭಟ್ಟ ಬೆಳಶೇರ, ತೇಜಸ್ವಿ ಗಾಂವ್ಕರ, ರಾಮಕೃಷ್ಣ ಕಂಚನಗದ್ದೆ ಕವನ ವಾಚಿಸಲಿದ್ದಾರೆ.

300x250 AD

ನಂತರ ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದಲ್ಲಿ ನಂದೊಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ತಾಳಮದ್ದಲೆ ನಡೆಯಲಿದೆ ಎಂದು ಸಿರಿ ಕಲಾ ಬಳಗದ ಅಧ್ಯಕ್ಷ ರವೀಂದ್ರ ಭಟ್ಟ ವೈದಿಕರಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top