Slide
Slide
Slide
previous arrow
next arrow

ನಟರಾಜ ನೃತ್ಯ ಶಾಲೆಗೆ ದಶಕಗಳ ಸಂಭ್ರಮ: ಜ.14ಕ್ಕೆ ವಾರ್ಷಿಕೋತ್ಸವ

300x250 AD

ಶಿರಸಿ: 1993ರಲ್ಲಿ ಸ್ಥಾಪನೆಯಾದ ನಟರಾಜ ನೃತ್ಯ ಶಾಲೆಯು, ಕಳೆದ ಮೂರು ದಶಕಗಳಿಂದ, ಪ್ರತಿ ವರ್ಷವೂ ವಾರ್ಷಿಕೋತ್ಸವ – ನೃತ್ಯ ಪ್ರದರ್ಶನ ಏರ್ಪಡಿಸುತ್ತಾ ಬಂದಿದ್ದು ಅತಿ ಹರುಷದ ಸಂಗತಿ. ಇದೇ ಪರಂಪರೆಯನ್ನು ಮುಂದುವರಿಸುತ್ತಾ, ಜ.14,ಭಾನುವಾರ 30ನೇ ವರ್ಷದ ವಾರ್ಷಿಕೋತ್ಸವವನ್ನು ತೋಟಗಾರ ಕಲ್ಯಾಣ ಮಂಟಪದಲ್ಲಿ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.

ಅಂದು ನೃತ್ಯ ಶಾಲೆಯ ಹಿರಿ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯವನ್ನು ಹಾಗೂ 30ನೇ ವರ್ಷದ ಪ್ರಯುಕ್ತ ಗುರು ಸೀಮಾ ಭಾಗ್ವತ್ ಹಾಗೂ ವಿದುಷಿ ದೀಪಾ ಭಾಗ್ವತ ಅವರ ಯುಗಳ ನೃತ್ಯವನ್ನು ಕಲಾರಾಧಕರ ಎದುರು ಪ್ರಸ್ತುತ ಪಡಿಸಲು ನೃತ್ಯ ಶಾಲೆಯು ಸಜ್ಜಾಗಿದೆ.

ಪ್ರದೀಪ ಭಾಗ್ವತರ ಮಾರ್ಗದರ್ಶನದಲ್ಲಿ ನಟರಾಜ ನೃತ್ಯಶಾಲೆಯು 3 ದಶಕಗಳನ್ನು ಪೂರೈಸಿ, 31ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಕಾಲಘಟ್ಟದಲ್ಲಿ ಹಲವು ಏಳು-ಬೀಳುಗಳ ನಡುವೆಯೂ, ಅನೇಕ ಮಕ್ಕಳಿಗೆ ವಿದ್ಯಾದಾನ ಮಾಡಿದ, ಹಲವು ಕಲಾವಿದರನ್ನು ಗೌರವಿಸಿದ, ವಿಶೇಷ ಪ್ರತಿಭಾನ್ವಿತರನ್ನು ಪುರಸ್ಕರಿಸಿದ, ಪಾಲಕರ, ಸಮಾಜದ ಪ್ರೀತಿಗಳಿಸಿದ ಧನ್ಯತಾಭಾವ ನಮ್ಮೊಂದಿಗಿರುವುದೇ ನೃತ್ಯಶಾಲೆಯ ದೊಡ್ಡ ಆಸ್ತಿ. ಪ್ರತೀವರ್ಷದಂತೆ ಈ ವರ್ಷವೂ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಎಲ್ಲ ಯುವ ವಿದ್ಯಾರ್ಥಿಗಳಿಗೆ ಒಂದು ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡುವುದೇ ವಾರ್ಷಿಕೋತ್ಸವದ ಉದ್ದೇಶವಾಗಿದೆ.

300x250 AD

ಇಂದಿನ ಯುವ ಜನಾಂಗವು ನಾಟ್ಯ, ಸಂಗೀತ, ವಿವಿಧ ವಾದನಗಳಲ್ಲಿ ಆಸಕ್ತಿ ಹೊಂದಿ, ಕಲಿಕೆಯಲ್ಲಿ ತೊಡಗಿಸಿಕೊಳ್ಳುತಿರುವುದು ತುಂಬಾ ಸಂತಸದ ವಿಚಾರವಾಗಿದ್ದು, ಈ ದಿಶೆಯಲ್ಲಿ ಯುವತಿಯರಷ್ಟೆ ಅಲ್ಲದೆ ಯುವಕರೂ ನಮ್ಮ ಭಾರತೀಯ ಸಂಸ್ಕೃತಿಯ ಕಲೆಗಳಲ್ಲಿ ಸಾಧನೆ ಮಾಡುವ ಮನಸ್ಸು ಹೊಂದಿ, ಪರಿಶ್ರಮಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಕಲೆಗಳ ಮಹತ್ವವನ್ನು ತಿಳಿಸಿ, ಆ ದಿಶೆಯಲ್ಲಿ ಪ್ರೋತ್ಸಾಹಿಸುವಂತಾಗಲೆಂಬುದೇ ನಮ್ಮೆಲ್ಲರ ಹಾರೈಕೆ ಎಂದು ಗುರು ಸೀಮಾ ಭಾಗವತ್ ಆಶಯ ವ್ಯಕ್ತಪಡಿಸಿದ್ದಾರೆ.

ಅಂದಿನ ಭರತನಾಟ್ಯ ಕಾರ್ಯಕ್ರಮಕ್ಕೆ ಹಾಡುಗಾರಿಕೆಯಲ್ಲಿ ವಿದ್ವಾನ್ ಸ್ವರಾಗ ಸಿ. ಕೆ, ಕೇರಳ, ನಟುವಾಂಗದಲ್ಲಿ ಗುರು ಸೀಮಾ ಭಾಗ್ವತ್ ಹಾಗೂ ವಿದುಷಿ ದೀಪಾ ಭಾಗ್ವತ್ , ಶಿರಸಿ, ಮೃದಂಗದಲ್ಲಿ ವಿದ್ವಾನ್ ಸಾಯಿ ವಂಶಿ, ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ದೀಪಕ ಹೆಬ್ಬಾರ್, ಬೆಂಗಳೂರು ,ರಿಧಮ್ ಪ್ಯಾಡ್ ವಿದ್ವಾನ್ ರಾಘವೇಂದ್ರ ರಂಗದೊಳ್, ಶಿವಮೊಗ್ಗ. ವಯಲಿನ್ ವಿದ್ವಾನ್ ಶ್ರೀಕಾಂತ, ಮೈಸೂರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

Share This
300x250 AD
300x250 AD
300x250 AD
Back to top