ಸಿದ್ದಾಪುರ: ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗುಣಾತ್ಮಕ ಫಲಿತಾಂಶ ಬರಲು ತೃತೀಯ ಭಾಷೆ ಹಿಂದಿ ಮತ್ತು ಸಂಸ್ಕೃತದ ಕೊಡುಗೆ ಹೆಚ್ಚಿದೆ.ಈ ವರ್ಷವೂ ಸಹ ಉತ್ತಮ ಫಲಿತಾಂಶ ತರುವುದಕ್ಕೆ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕೆಂದು ಬಿಇಒ ಜಿ.ಐ.ನಾಯ್ಕ ಹೇಳಿದರು.
ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರೌಢಶಾಲಾ ಹಿಂದಿ ಮತ್ತು ಸಂಸ್ಕೃತ ಭಾಷಾ ಶಿಕ್ಷಕರ ವೇದಿಕೆ ಆಯೋಜಿಸಿದ್ದ ಎರಡನೇ ವಿಷಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನಾಣಿಕಟ್ಟಾ ಪ್ರೌಢಶಾಲೆಯ ಹಿರಿಯ ಸಹಾಯಕ ಶಿಕ್ಷಕಿ ಆಶಾ ಬಿ. ಅಧ್ಯಕ್ಷತೆವಹಿಸಿದ್ದರು. ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಹಿಂದಿ ಭಾಷಾ ಶಿಕ್ಷಕಿ ವಿನ್ನಿ ಡಿಸೋಜಾ ಹಾಗೂ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯಿಂದ ವರ್ಗಾವಣೆಗೊಂಡ ರಾಘವೇಂದ್ರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಕುರಿತು ಪರಿಮಳ ಗೌಡ ಅನಿಸಿಕೆ ವ್ಯಕ್ತಪಡಿಸಿದರು. ಕಾನಗೋಡ ಪ್ರೌಢಶಾಲೆಯ ಆರ್.ಆರ್.ನಾಯ್ಕ, ಕೋಲಸಿರ್ಸಿ ಪ್ರೌಢಶಾಲೆಯ ವಿ.ಡಿ.ನಾಯ್ಕ ಅಭಿನಂದನಾ ಪತ್ರವಾಚಿಸಿದರು. ಹಾರ್ಸಿಕಟ್ಟಾ ಪ್ರೌಢಶಾಲೆಯ ರಾಜೇಂದ್ರ ಕಾಂಬ್ಳೆ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ಬಿ ಆರ್‌ಪಿ ಕೃಷ್ಣಮೂರ್ತಿ,ಸಂಸ್ಕೃತ ಭಾಷೆಯ ಮುಖ್ಯಸ್ಥ ಆರ್.ವಿ.ದೀಕ್ಷಿತ್ ಉಪಸ್ಥಿತರಿದ್ದರು. ವೇದಿಕೆಯ ಸಂಚಾಲಕ ಡಿ.ಜಿ.ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ನಾಣಿಕಟ್ಟಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಟಿ.ಕೆ.ನಾಯ್ಕ ಸ್ವಾಗತಿಸಿದರು.ರೂಪಾ ನಾಣಿಕಟ್ಟಾ,ಗೀತಾ ಭಟ್ಟ ಜಿಡ್ಡಿ ನಿರ್ವಹಿಸಿದರು. ಕಾರ್ಯಾಗಾರದಲ್ಲಿ ತಾಲೂಕಿನ ಎಲ್ಲ ಪ್ರೌಢಶಾಲೆಯ ಹಿಂದಿ ಹಾಗೂ ಸಂಸ್ಕೃತ ಭಾಷಾ ಶಿಕ್ಷಕರು ಪಾಲ್ಗೊಂಡಿದ್ದರು.