Slide
Slide
Slide
previous arrow
next arrow

ಎನ್ಎಸ್ಎಸ್ ಶಿಬಿರ ವ್ಯಕ್ತಿತ್ವ ರೂಪಿಸುತ್ತದೆ: ಎಸ್.ಕೆ.ಭಾಗವತ್

300x250 AD

ಶಿರಸಿ: ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುವುದು ಸಮಾಜದಲ್ಲಿ ಅವನು ಹೇಗೆ ಬೆರೆಯುತ್ತಾನೆ ಹಾಗೂ ಹೇಗೆ ಭಾಗವಹಿಸುತ್ತಾನೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ನಾವು ಜೀವನದಲ್ಲಿ ಹೇಗೆ  ಬದುಕಬೇಕು ಎಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಎನ್ಎಸ್ಎಸ್ ಶಿಬಿರ ನಮಗೆ ನೀಡುತ್ತದೆ ಎಂದು ಕಾಲೇಜು ಉಪಸಮಿತಿಯ ಅಧ್ಯಕ್ಷ ಎಸ್. ಕೆ. ಭಾಗವತ್ ಹೇಳಿದರು.

ಅವರು ದೊಡ್ನಳ್ಳಿ ಗ್ರಾಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಕೊನೆಯ ದಿನದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ನಮ್ಮ ಕಾಲೇಜಿನಲ್ಲಿ ಮೊದಲ ಬಾರಿಗೆ ಎನ್ಎಸ್ಎಸ್ ಶಿಬಿರವನ್ನು ಪ್ರಾರಂಭಿಸಿದಾಗ ನಮ್ಮ ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯ ಎಲ್. ಟಿ. ಶರ್ಮ ಇದನ್ನು ಆರಂಭಿಸಿದ್ದರು. ಅವರ ವ್ಯಕ್ತಿತ್ವವನ್ನು ಇಂದು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಹಾಗೂ ಕೊಂಡಾಡುತ್ತಾರೆ. ಸೋಂದಾ ಗ್ರಾಮದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನಮ್ಮ ಜಿಲ್ಲೆಯ ಐತಿಹಾಸದ ಕುರಿತು ಗೋಷ್ಠಿಗಳನ್ನು ತಜ್ಞ ರನ್ನು ಕರೆಸಿ ಆಯೋಜಿಸಿದ್ದರು.  ನಮ್ಮ ಎಂಇಎಸ್ ಸಂಸ್ಥೆ ಕಳೆದ 40 ವರ್ಷಗಳಿಂದ ಈ ಎನ್ ಎಸ್ ಎಸ್ ಶಿಬಿರವನ್ನು ನಡೆಸುತ್ತಾ ಬಂದಿದೆ. ಇಂತಹ ಒಂದು ಕ್ಯಾಂಪ್ನಲ್ಲಿ ಭಾಗವಹಿಸುವುದರಿಂದ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಬೇಕಾಗುವ ಎಲ್ಲಾ ಒಳ್ಳೆಯ ಅಂಶಗಳನ್ನು ವಿಚಾರಗಳನ್ನು ಇದು ನಮಗೆ ಕಲಿಸಿಕೊಡುತ್ತದೆ. ಕೇವಲ ಓದುಬರಹದಿಂದ ನಮ್ಮ ಜೀವನದಲ್ಲಿ ಸಾಧನೆ ಸಾಧ್ಯವಾಗುವುದಿಲ್ಲ. ಓದು ಬರಹದ ಜೊತೆಗೆ ಅದಕ್ಕೆ ಅಗತ್ಯ ಇರುವಂತಹ ಕೌಶಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಮಾತ್ರ ಏನನ್ನಾದರೂ ಕೂಡ ಸಾಧಿಸಬಹುದು ಎಂದು ಹೇಳಿದರು. 

ಕಾಲೇಜು ಉಪಸಮಿತಿಯ ಸದಸ್ಯ ಪ್ರಸಾದ್ ಭಟ್ ಮಾತನಾಡಿ ವ್ಯಕ್ತಿತ್ವ ಎಂದರೆ ನಮಗೆ ನೆನಪಿಗೆ ಬರುವುದು ದರ್ಶನ್, ಸುದೀಪ್ ರಂತಹ ನಟರು ಆದರೆ ಅದು ವ್ಯಕ್ತಿತ್ವವಲ್ಲ ನಮ್ಮ ಜೀವನದಲ್ಲಿ ನಾವು ರೂಡಿಸಿಕೊಳ್ಳುವಂತಹ ಶಿಸ್ತೇ ನಮ್ಮ ವ್ಯಕ್ತಿತ್ವವಾಗುತ್ತದೆ. ನಾಲ್ಕು ಕೋಣೆಗಳ ನಡುವೆ ಕಲಿಯುವ ವಿದ್ಯೆಗಿಂತ ಎನ್ಎಸ್ಎಸ್ ನಂತಹ ಶಿಬಿರದಲ್ಲಿ ನಾಲ್ಕು ಜನರ ಜೊತೆ ದಿನ ಕಳೆದು ಅನುಭವವನ್ನು ಕಲಿಯುವುದು ದೊಡ್ಡದಾಗಿದೆ ಎಂದು ಹೇಳಿದರು. 

300x250 AD

     ಗ್ರಾಮದ ಸಹಕಾರಿ ಸಂಘದ ಅಧ್ಯಕ್ಷ ಎಸ್ ಎನ್ ಹೆಗಡೆ  ಮಾತನಾಡಿ ಪರಿಸರ ಎನ್ನುವುದು ಒಂದೊಂದು ಊರಿನಲ್ಲಿ ವಿಭಿನ್ನವಾಗಿರುತ್ತದೆ ಆದ್ದರಿಂದ ಪ್ರತಿಯೊಂದು ವಿಭಿನ್ನ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಎನ್ ಎಸ್ ಎಸ್ ನಂತಹ ಶಿಬಿರಗಳು ನಮ್ಮಲ್ಲಿ ಒಗ್ಗಟ್ಟನ್ನು ಏಕತೆಯನ್ನು ಕಲಿಸಿಕೊಡುತ್ತದೆ ಇವತ್ತು ದೊಡ್ಡ ದೊಡ್ಡ ನಗರಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದಾದರೂ ಒಂದು ಸಣ್ಣ ಸಮಸ್ಯೆ ಎದುರಾದರೆ ಸಾಕು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಆದರೆ ಗ್ರಾಮೀಣ ಭಾಗದಲ್ಲಿ ಇರುವಂತಹ ಹಾಗೂ ಎನ್ಎಸ್ಎಸ್ ನಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವಂತಹ ಯುವಕ ಯುವತಿಯರು ಹಾಗಲ್ಲ 18ರಿಂದ 22 ವಯಸ್ಸು ಇದು ನಮ್ಮ ಜೀವನವನ್ನು ರೂಪಿಸಿಕೊಳ್ಳುವಂತಹ ವಯಸ್ಸು ಆದರೆ ಇಂದು ಅನೇಕ ಯುವ ಜನರು ಸಿಗರೇಟ್ ಗುಟ್ಕಾದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

      ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಭಟ್, ಪ್ರಾಧ್ಯಾಪಕ ರಾಘವೇಂದ್ರ ಹೆಗಡೆ, ಪಂಚಾಯತ್ ಸದಸ್ಯ ರಘುಪತಿ ನಾಯ್ಕ್, ಪ್ರೊ, ಎಂ ಎನ್ ಭಟ್ , ಪ್ರೊ, ಮಹಾವೀರ ಶೆಟ್ಟಿ, ಕಛೇರಿ ಅಧೀಕ್ಷಕ ರವೀಂದ್ರ ಬಿ ಉಪಸ್ಥಿತರಿದ್ದರು. ಜಿಲ್ಲಾ ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪ್ರೊ ಜಿ ಟಿ ಭಟ್ ಸ್ವಾಗತಿಸಿ, ನಿರೂಪಿಸಿದರು. ಘಟಕದ ಸಂಚಾಲಕ ಡಾ ಆರ್ ಆರ್ ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top