Slide
Slide
Slide
previous arrow
next arrow

ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

300x250 AD

ಹಳಿಯಾಳ: ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಹಳಿಯಾಳದ ಗೋವಿಂದ ಶಿವಾಜಿ ಮರಾಠೆ ಶಿಕ್ಷೆಗೊಳಗಾದ ಅಪರಾಧಿ. ತನ್ನ ತಂದೆಯನ್ನು ನಿಂದಿಸಿದ ಎಂಬ ಕಾರಣಕ್ಕಾಗಿ ನಾರಾಯಣ ಶಿವಪ್ಪ ನಾಯ್ಕ ಅವರನ್ನು ಅಪಹರಿಸಿ, ಹಳಿಯಾಳ ಮಾಗವಾಡ ಸಮೀಪ ಕತ್ತು ಹಿಸುಕಿ ಕೊಲೆ ಮಾಡಿದ್ದ.
ಹಳಿಯಾಳ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಆರ್.ಪುಟ್ಟಸ್ವಾಮಿ ಗೌಡ ಆರೋಪಿಯನ್ನು ಬಂಧಿಸಿ, ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ.‌ಮಳಗೀಕರ್ ವಾದ ಮಂಡಿಸಿದ್ದರು.
ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಕಿರಣ ಕಿಣಿ ಅವರು ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ. ಅಲ್ಲದೇ ಕೊಲೆಯಾದ ವ್ಯಕ್ತಿಯ ತಾಯಿಗೆ 50 ಸಾವಿರ ರೂ.‌ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top