ಕುಮಟಾ: ಮೋದಿಯವರನ್ನು ಇನ್ನೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಉದ್ದೇಶದಿಂದ ನಮೋ ಬ್ರಿಗೇಡ್ ಹಲವಾರು ಕೆಲಸಗಳನ್ನು ಮಾಡುತ್ತಾ ಬಂದಿದೆ. ಇದರ ಮುಂದುವರೆದ ಭಾಗವಾಗಿ ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸುಮಾರು ಎರಡು ತಿಂಗಳುಗಳ ಕಾಲ ಪ್ರತಿ ಭಾನುವಾರದಂತೆ ಜನವರಿ ೦೭ ತಲಗೋಡ ಗ್ರಾಮದ ಊರಕೇರಿ ಶಾಲೆ, 21 ಜನವರಿ ಕಲವೆ ಗ್ರಾಮದ ದೇವಸ್ಥಾನ, 28 ಜನವರಿ ಐಗಳಕುರ್ವೆ ಗ್ರಾಮದ ಶಾಲೆ ಹಾಗೂ 04 ಫೆಬ್ರವರಿ ಹಣ್ಣೆಮಠ ಗ್ರಾಮದ ದೇವಸ್ಥಾನ, 11 ಫೆಬ್ರವರಿ ಗೇರಸೊಪ್ಪಾ ಗ್ರಾಮದ ದೇವಸ್ಥಾನ, 18 ಫೆಬ್ರವರಿ ಹಡಿನಬಾಳ ಗ್ರಾಮದ ದೇವಸ್ಥಾನ, 25 ಫೆಬ್ರವರಿ ನವಿಲಗೋಣ ಗ್ರಾಮದ ದೇವಸ್ಥಾನ ಮತ್ತು 03 ಮಾರ್ಚ ಕಲ್ಲಬ್ಬೆ ಗ್ರಾಮದ ದೇವಸ್ಥಾನದಲ್ಲಿ ಬೆಳೆಗ್ಗೆ 8.30 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ನಡೆಯಲಿದ್ದು ಹತ್ತಿರದ ಹಳ್ಳಿಯ ಜನರು ಉಪಯೋಗ ಪಡೆದುಕೊಳ್ಳಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಈ ಆರೋಗ್ಯ ತಪಾಸಣಾ ಶಿಬಿರಕ್ಕೆ ಕುಮಟಾದ ಸುಪ್ರಸಿದ್ಧ ವೈದ್ಯರುಗಳಾದ ಡಾ.ಮಲ್ಲಿಕಾರ್ಜುನ ನೇತ್ರ ತಜ್ಞರು, ಡಾ.ಪ್ರಕಾಶ ಭಟ್ ಕಿವಿ ಮೂಗು ಗಂಟಲು ತಜ್ಞರು, ಡಾ.ಹರ್ಷ ಸುರೇಶ ಹೆಗಡೆ ದಂತ ವೈದ್ಯರು, ಡಾ.ಸಂತೋಷಿ ಎಮ್ ನಾಯ್ಕ ಚರ್ಮ ರೋಗ ತಜ್ಞರು, ಡಾ.ವಿಶ್ವಾಸ ನಾಯ್ಕ ಚರ್ಮ ರೋಗ ತಜ್ಞರು ಆಗಮಿಸಲಿದ್ದಾರೆ.