ದಾಂಡೇಲಿ : ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕಟ್ಟಡಗಳು ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳಲ್ಲಿ ಶೇಕಡ 60ರಷ್ಟು ಕನ್ನಡ ಮತ್ತು ಶೇಕಡ 40ರಷ್ಟು ಆಂಗ್ಲ ಭಾಷೆಯನ್ನು ಬಳಸುವಂತೆ ಅಗ್ರಹಿಸಿ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಕರವೇ ರಾಜ್ಯಾದ್ಯಕ್ಷರಾದ ಟಿ.ಎ.ನಾರಾಯಣ ಗೌಡರನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ, ಕೂಡಲೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಕರವೇ (ನಾ) ಬಣದ ವತಿಯಿಂದ ನಗರದ ಬಸ್ ನಿಲ್ದಾಣದ ಮುಂಭಾಗದ ಜೆ.ಎನ್.ರಸ್ತೆಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾ) ಬಣದ ಅದ್ಯಕ್ಷರಾದ ತಾಲೂಕು ಅಧ್ಯಕ್ಷರಾದ ಸಾಧಿಕ್ ಮುಲ್ಲಾ, ಸಂಘಟನೆಯ ಪದಾಧಿಕಾರಿಗಳಾದ ಅಶೋಕ ಮಾನೆ, ರಬ್ಬಾನಿ ದುಕಾನ್ದಾರ. ಸಮೀರ ಅಂಕೋಲೆಕರ, ಮುಜಿಬಾ ಛಬ್ಬಿ, ವಾಹಿದ ಕ್ಯೂರೇಶಿ, ವಿನೋದ ಮೀಸಲೆ, ಗಣಪತಿ ಹಲಗೇಕರ್, ಮಾರುತಿ ಹಲಗೇಕರ್, ಸಿಕಂದರ್ ಹಂದರ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.