ಶಿರಸಿ: ಜೇನು ಕೃಷಿಯ ಮೂಲಕ ಹೆಸರು ಮಾಡಿದ, ಜೇನಿನ ಹಲವು ಉಪ ಉತ್ಪನ್ನಗಳನ್ನೂ ತಯಾರಿಸಿ ಮಾರುಕಟ್ಟೆ ಒದಗಿಸಿದ ತಾಲೂಕಿನ ತಾರಗೋಡಿನ ಕಲ್ಲಳ್ಳಿಮನೆಯ ಮಧುಕೇಶ್ವರ ಹೆಗಡೆ ಅವರಿಗೆ ಗ್ವಾಲಿಯರ್‌ನ ವಿಶ್ವ ವಿದ್ಯಾಲಯ ನೀಡುವ ಅತ್ಯುತ್ತಮ ಕೃಷಿ ಉತ್ಪನ್ನ ಉದ್ದುಮೆದಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಒಂದು ಆರೋಗ್ಯ, ಒಂದು ಜಗತ್ತು ಯೋಜನೆ ಅಡಿ ನಡೆಸಲಾದ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ನೀಡಿ ಅಭಿನಂದಿಸಿದರು. ಈ ವೇಳೆ ಉಪ ಕುಲಪತಿ ಡಾ. ಎ.ಕೆ.ಶುಕ್ಲ, ಪ್ರಮುಖರಾದ ಡಾ. ಎಸ್.ಕೆ.ಬೆಹರಾ, ಡಾ. ಸುನೀತಾ ಚೌಧರಿ ಇತರರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.