ಶಿರಸಿ: ಶಿರಸಿಯಲ್ಲಿ ಜರುಗಿದ ರಾಜ್ಯಮಟ್ಟದ ವಕೀಲರ ಮೇಳ-2023 ರ ವಕೀಲರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆಯಲ್ಲಿ, ಉಡುಪಿ ವಕೀಲರು ಸಮಗ್ರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ ಎಂದು ಸ್ಫಂದನಾ ಲೀಗಲ್ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಫಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಡಿಸೆಂಬರ್ 23 ರಿಂದ 25 ರವರೆಗೆ ಶಿರಸಿಯಲ್ಲಿ ಜರುಗಿದ ರಾಜ್ಯ ಮಟ್ಟದ ವಕೀಲರ ಮೇಳದಲ್ಲಿ ಸ್ಫರ್ಧೆ ಜರುಗಿಸಲಾಗಿತು.
ಮೇಳದ ಅಂಗವಾಗಿ ಜರುಗಿದ ಕ್ರೀಕೇಟ್‌ನಲ್ಲಿ ಚಾಂಪಿಯನ್ ಉಡುಪಿ, ರನ್ನರ್ಸ್ ಆಫ್ ಮಂಡ್ಯ, ಥ್ರೋಬಾಲ್‌ನಲ್ಲಿ ಚಾಂಪಿಯನ್ ಮಂಗಳೂರು, ರನ್ರ‍್ಸಅಫ್ ಉಡುಪಿ ವಕೀಲರ ತಂಡ ಪ್ರಶಸ್ತಿ ಪಡೆದುಕೊಂಡಿತು.
ಮೇಳದಲ್ಲಿ ಕ್ರೀಡಾ ವೀರಾಗ್ರಣಿ ಮಂಗಳೂರು, ಉತ್ತಮ ಶಿಸ್ತಿನ ತಂಡ ಮಡಿಕೇರಿ, ಉತ್ತಮ ಪ್ರದರ್ಶನ ಶಿವಮೊಗ್ಗ ವಕೀಲರ ತಂಡ ಪಡೆದುಕೊಂಡಿತು. ಕ್ರಿಕೇಟ್‌ನಲ್ಲಿ ಪೈನಲ್ ಮ್ಯಾನ್ ಆಫ್ ದಿ ಮ್ಯಾಚ್ ನಾಗರಾಜ(ಉಡುಪಿ), ಬೆಸ್ಟ ಬ್ಯಾಟ್ಸಮೆನ್ ಮತ್ತು ಮ್ಯಾನ್ ಆಫ್ ದಿ ಸಿರಿಸ್ ಪ್ರಸನ್ನ(ಮಂಡ್ಯ), ಬೆಸ್ಟ ಬೌಲರ್ ವಿನಯ್ ಪಾಟೀಲ್(ಹುಕ್ಕೇರಿ) ಪ್ರಶಸ್ತಿ ಪಡೆದುಕೊಂಡರು.
ವಕೀಲರ ಮೇಳ 2೦23ರ ಉತ್ತಮ ಸ್ಫರ್ಧಾ ಪಟು ಎಂದು ಮೈಸೂರಿನ ಅಭಿಲಾಷ ಪ್ರಶಸ್ತಿಗೆ ಪಾತ್ರರಾದರು.
ಗುಂಪು ನೃತ್ಯದಲ್ಲಿ ಪ್ರಥಮ ಮಡಿಕೇರಿ, ದ್ವೀತಿಯ ಮಂಗಳೂರು, ತೃತೀಯ ಕುಮಟ ವಕೀಲರ ತಂಡ ಪ್ರಶಸ್ತಿ ಪಡೆದುಕೊಂಡರು. ಗುಂಪು ಹಾಡುವ ಸ್ಫರ್ಧೆಯಲ್ಲಿ ಪ್ರಥಮ ಚಿತ್ರದುರ್ಗ, ದ್ವೀತಿಯ ಕುಮಟ, ತೃತೀಯ ಹುಬ್ಬಳ್ಳಿ ವಕೀಲರ ತಂಡ ಪ್ರಶಸ್ತಿ ಪಡೆದುಕೊಂಡಿತು. ಸುಳ್ಳು ಹೇಳುವ ಸ್ಫರ್ಧೇಯಲ್ಲಿ ಪ್ರಥಮ ಶರಾವತಿ ಗೌಡ(ಸಾಗರ), ದ್ವೀತಿಯ ಜಯಲಕ್ಷ್ಮಿಪ(ಮಂಡ್ಯ), ತೃತೀಯ ವಿದ್ಯಾಜೋಶಿ(ಕುಮಟ), ಸುಮನಾ(ಮಂಗಳೂರು) ಇವರುಗಳು ಪ್ರಶಸ್ತಿ ಪಡೆದುಕೊಂಡರು.
ಮೇಳದಲ್ಲಿ ಜಾನಪದ ಗೀತೆ, ಛಧ್ಮವೇಶ ಸ್ಫರ್ಧೆ, ಹಿಂದಿ ಚಲನಚಿತ್ರ ಗೀತೆ, ಕನ್ನಡ ಚಲನಚಿತ್ರ ಗೀತೆ, ಪ್ಯಾಷನ್ ಶೋ, ನೃತ್ಯ ವಿವಿಧ ಸಾಂಸ್ಕçತಿಕ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು.