Slide
Slide
Slide
previous arrow
next arrow

ಚಂದನ ಶಾಲೆಯ ವಿನೂತನ ವಾರ್ಷಿಕ ಹಬ್ಬ ಯಶಸ್ವಿ

300x250 AD

ಶಿರಸಿ: ಅತ್ಯಂತ ವೈವಿಧ್ಯಮಯವೂ ವಿನೂತನವಾದ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನ ವಾರ್ಷಿಕ ಹಬ್ಬ ಸಂಪನ್ನಗೊಂಡಿತು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಚಂದನ ವಾರ್ಷಿಕ ಹಬ್ಬದಲ್ಲಿ ಆಗಮಿಸಿದ ಸರ್ವರನ್ನು ಮಿಯಾರ್ಡ್ಸ್ ಸಂಸ್ಥೆಯ ಸಂಸ್ಥಾಪಕರು ,ಕಾರ್ಯದರ್ಶಿಗಳು ಆದ ಎಲ್ಎಮ್ ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ಉದ್ಘಾಟಕರಾಗಿ ಆಗಮಿಸಿದ್ದ ಸಿದ್ದಾಪುರದ ಶ್ರೀ ಶಂಕರಮಠದ ಧರ್ಮದರ್ಶಿಗಳಾದ ವಿಜಯ ಹೆಗಡೆ ದೊಡ್ಮನೆ ಶಾಲೆಯನ್ನು ಶ್ಲಾಘಿಸುತ್ತಾ ಮಾತನ್ನು ಪ್ರಾರಂಭಿಸಿ, ಶಿಕ್ಷಣದ ಮಹತ್ವ , ಮಕ್ಕಳ ಕಲಿಕೆಯಲ್ಲಿ ಬರುವ ಸಮಸ್ಯೆಗಳು ಅವುಗಳ ಪರಿಹಾರವನ್ನು ಅತ್ಯಂತ ಚಿಂತನಾತ್ಮಕವಾಗಿ ವಿವರಿಸಿದರು. ಅದೇ ರೀತಿ ಇನ್ನೋರ್ವ ಅತಿಥಿಗಳಾದ ವಿವೋವೆ ಫೌಂಡೇಶನ್ ಬೆಂಗಳೂರಿನ ಸಂಸ್ಥಾಪಕರು,ಸಾಮಾಜಿಕ ಉದ್ಯಮಿಗಳೂ ಆದ ವಿನಯ ಶಿಂಧೆಯವರು ಮಾತನಾಡಿ, ಮಕ್ಕಳ ಬಾಲ್ಯದ ಶಿಕ್ಷಣವೇ ಅವರ ಮುಂದಿನ ಭವಿಷ್ಯದ ರಹದಾರಿಯಾಗಿದ್ದು, ಉತ್ತಮ ಸಾಮಾಜಿಕ ಕಳಕಳಿಯುಳ್ಳ ನಾಗರಿಕರಾಗಿ ಎಂದು ಮಕ್ಕಳನ್ನು ಹರಸಿದರು.

ಇದೇ ಸಂದರ್ಭದಲ್ಲಿ ಅವರ ಧರ್ಮ ಪತ್ನಿಯವರಾದ ಶ್ರೀಮತಿ ಮೊನಾಲಿಸಾ ಶಿಂಧೆ ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಯಾರ್ಡ್ಸ್ ಶಿರಸಿಯ ಅಧ್ಯಕ್ಷರಾದ ಎಸ್.ಆರ್. ಹೆಗಡೆಯವರು ವಹಿಸಿದ್ದರು. ಮಾಜಿ ಜಿ.ಪಂ.ಸದಸ್ಯರಾದ ಜಿ.ಎನ್. ಹೆಗಡೆ ಮರೇಗಾರ್, ಶ್ರೀಮತಿ ಉಷಾ ಹೆಗಡೆ, ನರೇಬೈಲ್ ಗ್ರೂ.ಗ್ರಾ.ಸೇ.ಸ.ಸಂ ದೊಡ್ನಳ್ಳಿ ಇದರ ಅಧ್ಯಕ್ಷರಾದ ಎಸ್.ಎನ್. ಹೆಗಡೆ ದೊಡ್ನಳ್ಳಿ, ಗ್ರಾ.ಪಂ ದೊಡ್ನಳ್ಳಿಯ ಸದಸ್ಯರಾದ ರಘುಪತಿ ನಾಯ್ಕ , ನಿವೃತ್ತ ಕೆ.ಇ.ಬಿ ಇಂಜನೀಯರ್ ಆದ ಎಂ.ಆರ್. ಹೆಗಡೆ,ಚಂದನ ಪಿ ಯ ಕಾಲೇಜನ ಸಿ ಇ ಓ ಹಾಗೂ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಸಿ.ಡಿ.ನಾಯ್ಕ್, ಶಾಲಾ ಆಡಳಿತಾಧಕಾರಿ ಶ್ರೀಮತಿ ವಿದ್ಯಾ ನಾಯ್ಕ್, ಮುಖ್ಯೋಪಾಧ್ಯಾಯರಾದ ಸಿಂಧೂರ್ ಭಟ್ ಮತ್ತು ಶ್ರೀಮತಿ ಕಲ್ಪನಾ ಹೆಗಡೆ ,ಆಡಳಿತ ಮಂಡಳಿ ಸದಸ್ಯರು ,ಶಾಲಾ ಹಿತೈಷಿಗಳು ,ಪಾಲಕರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತೀಕ್ಷಾ ಭಟ್ ಮತ್ತು ದೀಪ್ತಿ ಹೆಗಡೆ ನಿರೂಪಿಸಿದರು. ಮಿಯಾರ್ಡ್ಸ ಸದಸ್ಯರಾದ ಸತೀಶ ಹೆಗಡೆ ಗೋಳಿಕೊಪ್ಪ ವಂದಿಸಿದರು.

300x250 AD

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿರಸಿ ತಾಲೂಕಾ ಮಟ್ಟದಲ್ಲಿ ವಿಷಯವಾರು ಹೆಚ್ಚು ಪ್ರತಿಶತ ಸಾಧಿಸಿದ ನಮ್ಮ ಚಂದನ ಶಾಲೆಯ 4 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಮಧ್ಯಾಹ್ನದ ನಂತರ ಮಕ್ಕಳು ಪುಣ್ಯಕೋಟಿ, ಶ್ರೀಕೃಷ್ಣನ ಜನನದ ಕಥೆ,ಜನಪದ ನೃತ್ಯ,ಕೋಲಾಟ, ರಾಮಾಯಣದ ರೂಪಕ,ಭರತ ನಾಟ್ಯ,ತಬಲಾ ವಾದನ,ವೀರಗಾಸೆ,ಯೋಗ ನೃತ್ಯ, ಪಿರಾಮಿಡ್ ನೃತ್ಯ, ಭಗೀರಥ ಗಂಗೆಯನ್ನು ಭೂಮಿಗೆ ತಂದ ಕಥೆ, ವಿದ್ಯಾರ್ಥಿಗಳಿಂದ ತಾಳ ಮದ್ದಲೆ ಹೀಗೆ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸೇರಿದ ಸಾವಿರಾರು ಮಂದಿಯನ್ನು ರಂಜಿಸಿದರು.

Share This
300x250 AD
300x250 AD
300x250 AD
Back to top