ಹೊನ್ನಾವರ : ರಾಜ್ಯ ಸರ್ಕಾರ ಅನ್ನ ಭಾಗ್ಯದ ಅಕ್ಕಿಯ ಬದಲು ಹಣ ನೀಡುತ್ತಿದ್ದು. ಆ ಯೋಜನೆ ಕೆಲವರಿಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ. ಹಣ ಜಮ ಆಗದೆ ಇರುವವರ ಪಡಿತರ ಚೀಟಿಯ ಪರಿಶೀಲನೆಗೆ ಆಹಾರ ಪರಿವೀಕ್ಷರ ಮುಖೇನ ಮಾಡಲಾಗುತ್ತಿದೆ.
ತಾಲೂಕಿನಲ್ಲಿಯೂ ಕೂಡ ವಿಎಸ್‌ಎಸ್ ಸೊಸೈಟಿಗಳಿಗೆ ಭೇಟಿ ನೀಡಿ ಅಂತಹ ಪಡಿತರ ಚೀಟಿ ಪರಿಶೀಲನೆ ಮಾಡಲಾಗುತ್ತಿದ್ದಾರೆ. ಅದರಂತೆ ರವಿವಾರ ಮುಗ್ವಾ ವಿಎಸ್‌ಎಸ್ ಸೊಸೈಟಿಗೆ ಆಹಾರ ಪರಿವೀಕ್ಷಕರು ಬರುತ್ತಾರೆ ಎಂದು ತಿಳಿಸಲಾಗಿತ್ತು. ಮುಗ್ವಾ ಗ್ರಾ. ಪಂ. ವ್ಯಾಪ್ತಿಯಲ್ಲಿ 46 ಜನರಿಗೆ ಇನ್ನೂ ಅನ್ನ ಭಾಗ್ಯದ ಹಣ ಜಮಾ ಆಗಿರಲಿಲ್ಲ. ಅದರಲ್ಲಿ 25 ಕ್ಕಿಂತ ಹೆಚ್ಚು ಜನ ಬೆಳಿಗ್ಗೆಯೇ ಕಚೇರಿಗೆ ಬಂದು ಕಾದು ಕುಳಿತ್ತಿದ್ದರು ಸಂಜೆಯ ತನಕ ಅಧಿಕಾರಿ ಬರದೆ ಇರುವುದರಿಂದ ಅಲ್ಲಿ ಬಂದಿರುವ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವು ವಯಸ್ಸು ಆದವರು, ದೂರದ ಊರಿನಿಂದ ಬಂದವರು ಸಂಜೆ ತನಕ ಊಟ ಮಾಡದೇ ಕಾದು ಕುಳಿತಿದ್ದರು.
ಅಲ್ಲಿ ಸೇರಿದ ಕೆಲವರು ಪತ್ರಿಕೆಯೊಂದಿಗೆ ಮಾತನಾಡಿ ಅನಾವಶ್ಯಕವಾಗಿ ನಮ್ಮನ್ನು ಕರೆಯಿಸಲಾಗಿದೆ. ರವಿವಾರದ ರಜೆ ದಿನ ಬರಲು ಹೇಳಿ ಸಂಜೆಯ ತನಕ ಕಾಯಿಸಿದ್ದಾರೆ ಎಂದು ಅಧಿಕಾರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇರುವ ಫುಡ್ ಇನ್ಸ್ಪೆಕ್ಟರ್ ಪ್ರಮೋಷನ್ ಆಗಿದ್ದು, ಅವರ ಜಾಗಕ್ಕೆ ಹೊಸದಾಗಿ ಬಂದಿರುವ ಮಹಿಳಾ ಅಧಿಕಾರಿ ಉಳಿದ ಸೊಸೈಟಿಗಳಿಗೆ ಹೋಗಿ ಬರುವಷ್ಟರಲ್ಲಿ ವಿಳಂಬವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.