Slide
Slide
Slide
previous arrow
next arrow

ಜನಪರ ಕಾರ್ಯಕ್ರಮಗಳನ್ನು ಜನರಿಗೆ ಉಪಯೋಗವಾಗುವಂತೆ ಸಂಘಟಿಸಿ: ಶಿವರಾಮ್ ಹೆಬ್ಬಾರ್

300x250 AD

ಯಲ್ಲಾಪುರ: ಸರಕಾರ ರೂಪಿಸುವ ಜನಪರ ಕಾರ್ಯಕ್ರಮಗಳು ಜನರಿಗೆ ಉಪಯೊಗ ಆಗುವ ಹಾಗೆ ಸಂಘಟಿಸಿಬೇಕು. ಜನರೂ ಸರಕಾರದ ಯೊಜನೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಗಾಂಧಿ ಕುಟೀರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗು ಜಯ ಭಾರತಮಾತೆ ನಗರ ಹಾಗು ಗ್ರಾಮೀಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಳಗೇರಿ ಪ್ರದೇಶದ ಬಿವಾಸಿಗಳಿಗೆ ಆಯೋಜಿಸಿದ್ದ ಉಚಿತ ಆರೊಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಯಲ್ಲಾಪುರದ ಹೆಬ್ಬಾರ್ ನಗರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ 579 ಮನೆಗಳು ಸರಕಾರದ ‌ಹೊಸ ಆದೇಶದಂತೆ ಕೇವಲ ಒಂದು ಲಕ್ಷ ರೂಪಾಯಿಗಳಿಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಮೂಲ ಸೌಕರ್ಯಗಳನ್ನು ಒದಗಿಸಲು ಬಾಕಿ ಹಣ ಬಿಡುಗಡೆಯನ್ನು ಮಾಡಲು ಸರ್ಕಾರ ಆದೇಶ ನೀಡಿದೆ ಎಂದು ಹೇಳಿದರು.

300x250 AD

ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರತೀಕ್ ದಳವಾಯಿ, ತಾಲೂಕಾ ಆರೋಗ್ಯಾಧಿಕಾರಿ ನರೇಂದ್ರ ಪವಾರ್, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ್ ಗಾವಡೆ, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಸುನಂದಾ ದಾಸ್ , ಮಕ್ಕಳ ತಜ್ಞ ಡಾ ಪ್ರವೀಣ , ಎಲಬು ಕೀಲು ತಜ್ಞ ಡಾ ಭರತ್ ಇದ್ದರು. ಎಸ್. ಟಿ. ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top