Slide
Slide
Slide
previous arrow
next arrow

ಇಡಗುಂಜಿ ಮಹಾಗಣಪತಿ ದರ್ಶನ ಪಡೆದ ಆರ್. ವಿ. ದೇಶಪಾಂಡೆ ದಂಪತಿ

300x250 AD

ಹೊನ್ನಾವರ : ಮಾಜಿ ಸಚಿವರು ಹಳಿಯಾಳ ಶಾಸಕರು ಆಗಿರುವ ಆರ್‌.ವಿ. ದೇಶಪಾಂಡೆ ತಮ್ಮ ಪತ್ನಿ ಜೊತೆಗೂಡಿ ರವಿವಾರ ಇಡಗುಂಜಿ ಮಹಾಗಣಪತಿಯ ದರ್ಶನವನ್ನು ಪಡೆದರು.

ಭಟ್ಕಳದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗುವಾಗ ಮಾರ್ಗಮದ್ಯದಲ್ಲಿ ಇಡಗುಂಜಿ ದೇವಾಲಯಕ್ಕೆ ಭೇಟಿ ನೀಡಿದರು. ನಂತರ ಮಂಕಿಯಲ್ಲಿರುವ ಆಪ್ತರೊಬ್ಬರ ಮನೆಯಲ್ಲಿ ಉಪಹಾರ ಸೇವಿಸಿ ಭಟ್ಕಳದ ಮದುವೆಯಲ್ಲಿ ಪಾಲ್ಗೊಂಡು ಮುರುಡೇಶ್ವರದಲ್ಲಿ ವಾಸ್ತವ್ಯ ಮಾಡಿದ್ದಾರೆ.

300x250 AD

ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಶರಾವತಿ ಕೋ ಅಪ್ ಸೊಸೈಟಿ ಅಧ್ಯಕ್ಷ ರಾಜು ನಾಯ್ಕ ಮಂಕಿ, ಮಾಜಿ ತಾ ಪಂ. ಅಧ್ಯಕ್ಷ ಅಣ್ಣಯ್ಯ ನಾಯ್ಕ ಉದ್ಯಮಿ ಕಾಂತಪ್ಪ ಶ್ಯಾನಭಾಗ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top