ಹೊನ್ನಾವರ : ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಅಡಿಕೆ ಬೆಳೆಗಾರರ ಮತ್ತು ಎಲ್ಲಾ ಬೆಳೆಗಾರ ರೈತರ ಸಭೆಯನ್ನು ಡಿ.16, ಶನಿವಾರದಂದು ಬೆಳಿಗ್ಗೆ 11.30ಕ್ಕೆ ಹೊನ್ನಾವರ ನ್ಯೂ ಇಂಗ್ಲೀಷ್ ಸ್ಕೂಲ್ ನ ಸಭಾ ಭವನದಲ್ಲಿ ಕರೆಯಲಾಗಿದೆ.
ಕುಮಟಾ ಕೃಷಿ ಮಾರುಕಟ್ಟೆ (APMC) ಯಲ್ಲಿ ರೈತರಿಗೆ ಆಗುವ ಹಾನಿ ಸರಿಪಡಿಸುವ ಕುರಿತು, ಆಗಾಗ ವಿದ್ಯುತ್ ವ್ಯತ್ಯಯದಿಂದ ರೈತರಿಗೆ ಆಗುವ ತೊಂದರೆಯನ್ನು ಸರಿಪಡಿಸುವ ಕುರಿತು, ಕಾಡು ಪ್ರಾಣಿಗಳ ಹಾವಳಿಯಿಂದ ರೈತರಿಗಾಗುವ ತೊಂದರೆಗಳ ಕುರಿತು ಚರ್ಚಿಸಲಾಗುವುದು. ಆದಿವಸ ರೈತ ಬಾಂಧವರು ಸಭೆಯಲ್ಲಿ ಹಾಜರಿದ್ದು ತಮ್ಮ ಸಲಹೆ ಮತ್ತು ಸೂಚನೆಯನ್ನು ನೀಡಬೇಕಾಗಿ ಸಹಕಾರಿ ಕ್ಷೇತ್ರದ ಹಿರಿಯ ಮುಖಂಡರಾಗಿರುವ ವಿ. ಎನ್. ಭಟ್ಟ ಅಳ್ಳಂಕಿ ಮತ್ತು ಪಿ ಎಸ್ ಭಟ್ಟ ಉಪ್ಪೊಣಿ ವಿನಂತಿ ಮಾಡಿಕೊಂಡಿದ್ದಾರೆ.