Slide
Slide
Slide
previous arrow
next arrow

ಕ್ರೀಡಾಕೂಟ: ವನಪಾಲಕ ಶಿವಣ್ಣ ಗೌಡಗೆ ಐದು ಚಿನ್ನದ ಪದಕ

300x250 AD

ಯಲ್ಲಾಪುರ: ತಾಲೂಕಿನ ಇಡಗುಂದಿ ವಲಯದ ಅರಣ್ಯ ಇಲಾಖೆಯ ವನಪಾಲಕ ಬೀರಗದ್ದೆಯ ಶಿವಣ್ಣ ನಾರಾಯಣ ಗೌಡ ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಕೆನರಾ ವೃತ್ತ ಮಟ್ಟದ ಕ್ರೀಡಾಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಾಗಿ ಎರಡು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ನೂರು ಮೀಟರ್ ಹಾಗೂ ಎರಡು ನೂರು ಮೀಟರ್ ಓಟದಲ್ಲಿ, ಹರ್ಡಲ್ಸ್, ಡಿಸ್ಕ್ ಥ್ರೋ, ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ ‌.
ಈ ಹಿಂದೆಯೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಶಿವಣ್ಣ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದರು.

300x250 AD
Share This
300x250 AD
300x250 AD
300x250 AD
Back to top