Slide
Slide
Slide
previous arrow
next arrow

ಸ್ವಾವಲಂಬಿ ಕುಟುಂಬ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರ ಅಪಾರ: ಬಾಬು ನಾಯ್ಕ್

300x250 AD

ಭಟ್ಕಳ: ಓರ್ವ ವ್ಯಕ್ತಿ ಶಕ್ತಿಯಾಗಿ ಬೆಳೆಯಬೇಕು, ಕುಟುಂಬವನ್ನು ಸ್ವಾವಲಂಬಿ ಕುಟುಂಬವನ್ನಾಗಿಸಲು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಆರಂಭವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 41 ವಸಂತಗಳನ್ನು ಪೂರೈಸಿದೆ ಎಂದು ಯೋಜನೆಯ ಉತ್ತರ ಕನ್ನಡ ಜಿಲ್ಲಾ ಪ್ರಭಾರ ನಿರ್ದೇಶಕ ಎ. ಬಾಬು ನಾಯ್ಕ ಹೇಳಿದರು.

ಅವರು ಇಲ್ಲಿನ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಗ್ರಹಣ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಧಿಕಾರಿ ಹಸ್ತಾಂತರಿಸಿ ಮಾತನಾಡಿ,
ಕರ್ನಾಟಕದಲ್ಲಿ ಇಂದು ಒಟ್ಟೂ 46,000 ಸಂಘಗಳಿದ್ದು ಇದರಲ್ಲಿ ಸೇರಿಕೊಂಡ ಸದಸ್ಯರ ಸಂಖ್ಯೆ 5,50,000ಕ್ಕೂ ಹೆಚ್ಚು ಇದ್ದಾರೆ. ಅವರ ಕುಟುಂಬಿಕರು, ಅವಲಂಬಿತರು ಸೇರಿದರೆ ಒಟ್ಟೂ ಸುಮಾರು ಮೂರು ಕೋಟಿ ಜನತೆ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಸಂಘಟನೆಯಲ್ಲಿ ಒಟ್ಟೂ 46 ಸಾವಿರ ಸಿಬ್ಬಂದಿಗಳಿದ್ದಾರೆ, ನಮ್ಮ ಸಂಘಟನೆಯ ನಿರಂತರ ಪತ್ರಿಕೆ ಸುಮಾರು 12 ಲಕ್ಷ ಪ್ರತಿಗಳು ಮುದ್ರಣವಾಗುತ್ತಿವೆ ಎಂದರೆ ನಮ್ಮೆಲ್ಲರ ಹೆಮ್ಮೆ ಎಂದ ಅವರು ಯೋಜನೆಯಿಂದ ಜನತೆಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು, ಸಹಾಯ ನೀಡಲಾಗುತ್ತಿದೆ ಎಂದರಲ್ಲದೇ ಆರೋಗ್ಯ ವಿಮೆಯನ್ನು ಕೂಡಾ ಮಾಡಲಾಗಿದ್ದು ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ನಮ್ಮ ಒತ್ತಡದ ಬದುಕಿನಲ್ಲಿ ನಮ್ಮ ಮಕ್ಕಳಿಗೆ ಸಂಸ್ಕಾರಯುತ ಜೀವನ ಕಲಿಸದೇ ಇರುವುದರಿಂದಾಗಿ ಇಂದು ವೃದ್ಧಾಶ್ರಮಗಳು ಜಾಸ್ತಿಯಾಗಿವೆ. ಮಾತೆಯರು ಮನೆಯಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಜೀವನ ಶಿಕ್ಷಣವನ್ನು ಕಲಿಸುತ್ತ ಗಮನ ಹರಿಸಬೇಕು ಎಂದೂ ಕರೆ ನೀಡಿದರು.
ಎಸ್.ಆರ್.ಜಿ.ಎಸ್.ಎಸ್.ಕಾಲೇಜು ಮುಗ್ವಾದ ಪ್ರೊ. ಡಾ. ಕೇಶವ ಕಿರಣ ಭಟ್ಟ ಧಾರ್ಮಿಕ ಉಪನ್ಯಾಸ ನೀಡಿದರು.

300x250 AD

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ನಮ್ಮಲ್ಲಿ ಧಾರ್ಮಿಕ ಭಾವನೆಯನ್ನು ವೃದ್ಧಿಸುವ ಕಾರ್ಯವಾಗಬೇಕಾಗಿದೆ. ಹಿಂದಿನ ಕುಟುಂಬ ವಾತಾವರಣ ಪುನ: ಬರಬೇಕಾಗಿದೆ ಎಂದ ಅವರು ಇಂದು ಮಾನವನು ಹಣದಾಸೆಗಾಗಿ ಎಲ್ಲವನ್ನು ಮರೆಯುತ್ತಿದ್ದಾನೆ ಅದು ಸರಿಯಲ್ಲ, ಹಣದ ಬಗ್ಗೆ ದುರಾಸೆ ಸರಿಯಲ್ಲ ಎಂದ ಅವರು ನಮ್ಮ ದುಡಿಮೆಯು ಸಾತ್ವಿಕ ದುಡಿಮೆಯಾಗಿರಲಿ ಎಂದೂ ಹೇಳಿದರು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ವೆಂಕಟ್ರಮಣ ದೇವಸ್ಥಾನದ ಕಮಿಟಿ ಅಧ್ಯಕ್ಷ ಅರುಣ ಜಟ್ಟಪ್ಪ ನಾಯ್ಕ, ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಹಾಗೂ ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ, ಅಗ್ನಿಶಾಮಕ ಠಾಣೆಯ ನಿವೃತ್ತ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಎಸ್., ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸುಮಾರು 157 ದಂಪತಿಗಳು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದರು. ತಾಲೂಕ ಯೋಜನಾಧಿಕಾರಿ ಗಣೇಶ ನಾಯ್ಕ ಸ್ವಾಗತಿಸಿದರು. ತಾಲೂಕಾ ಸಮನ್ವಯಾಧಿಕಾರಿ ವಿನೋದಾ ಬಾಲಚಂದ್ರ ನಿರೂಪಿಸಿದರು. ವಲಯದ ಮೇಲ್ವಿಚಾರಕ ಹಾಗೂ ಪೂಜಾ ಸಮಿತಿ ಕಾರ್ಯದರ್ಶಿ ಕೇಶವ ಜಿ. ವಂದಿಸಿದರು. ಪೂಜಾ ಸಮಿತಿಯ ಉಪಾಧ್ಯಕ್ಷ ದಿನೇಶ ನಾಯ್ಕ, ಜೊತೆಕಾರ್ಯದರ್ಶಿ ಅನಂತ ನಾಯ್ಕ, ಕೋಶಾಧಿಕಾರಿ ರೇಷ್ಮಾ ಖಾರ್ವಿ ಸಹಕರಿಸಿದರು.

Share This
300x250 AD
300x250 AD
300x250 AD
Back to top