ದಾಂಡೇಲಿ: ನಗರದ ಅಂಬೆವಾಡಿಯ ನಿವಾಸಿ, ಶತಾಯುಷಿ ಯಮುನಮ್ಮ ಬೈರೊಡಗಿ ಅವರು ಸೋಮವಾರ ವಿಧಿವಶರಾದರು.
ಇವರು ಕಾಡಿನ ವಿವಿಧ ಜಾತಿಯ ಹಣ್ಣುಗಳನ್ನು ಹಾಗೂ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವುದರ ಮೂಲಕ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಆದರ್ಶ ಮಾತೆಯಾಗಿ ಗಮನ ಸೆಳೆದಿದ್ದರು. ಯಮುನಮ್ಮ ಅವರು ಸರಳ, ಸಜ್ಜನಿಕೆಯ ಸ್ವಭಾವದಿಂದಲೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪ ಸೂಚಿಸಿದ್ದಾರೆ.