Slide
Slide
Slide
previous arrow
next arrow

ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯ ಒದಗಿಸಲು ಆಗ್ರಹ

300x250 AD

ಜೋಯಿಡಾ: ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿರುವ ಹಾಗೂ ಭೌಗೋಳಿಕವಾಗಿ ಬಹುದೊಡ್ಡ ತಾಲೂಕಾಗಿರುವ ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯವನ್ನು ಮಂಜೂರು ಮಾಡುವಂತೆ ತಾಲೂಕಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫೀಕ್ ಖಾಜಿ ಒತ್ತಾಯಿಸಿದ್ದಾರೆ.

ಜೋಯಿಡಾ ತಾಲೂಕು ಪ್ರವಾಸೋದ್ಯಮ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವಪೂರ್ಣವಾದ ಕೊಡುಗೆಯನ್ನು ನೀಡಿದೆ. ನಾಡಿಗೆ ಬೆಳಕನ್ನು ಕೊಟ್ಟ ಹಿರಿಮೆಯಿರುವ ಜೋಯಿಡಾ ತಾಲೂಕಿಗೆ ಅತೀ ಅಗತ್ಯವಾಗಿ ಬೇಕಾಗಿರುವ ನ್ಯಾಯಾಲಯದ ಕೊರತೆ ಇಲ್ಲಿನ ಜನತೆಯನ್ನು ನಿತ್ಯ ನಿರಂತರವಾಗಿ ಕಾಡುತ್ತಿದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟಂತೆ ಕೆಲಸ ಕಾರ್ಯಗಳಿಗೆ ದಾಂಡೇಲಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜೋಯಿಡಾ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಸಿವಿಲ್ ನ್ಯಾಯಾಲಯವನ್ನು ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.

300x250 AD
Share This
300x250 AD
300x250 AD
300x250 AD
Back to top