ಚಿಕ್ಕಮಗಳೂರಿನ ವಕೀಲ ಪ್ರೀತಮ್ ರವರ ಮೇಲಿನ ಪೊಲೀಸರ ಹಲ್ಲೆಗೆ ದಾಂಡೇಲಿಯಲ್ಲಿ ವಕೀಲರ ಸಂಘದಿಂದ ಖಂಡನೆ
ದಾಂಡೇಲಿ: ಚಿಕ್ಕಮಂಗಳೂರಿನ ವಕೀಲ ಪ್ರೀತಮ್ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ, ದಾಂಡೇಲಿ ವಕೀಲರ ಸಂಘವು ನಗರದ ಸಿವಿಲ್ ನ್ಯಾಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ ಕಚೇರಿ ನಿರೀಕ್ಷಕ ಗೋಪಿ ಚೌವ್ಹಾಣ್ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗೆ ಸಲ್ಲಿಸಲಾದ ಮನವಿಯಲ್ಲಿ ನ್ಯಾಯಾಂಗದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವ ವಕೀಲ ಸಮುದಾಯದ ಮೇಲೆ ನಡೆದ ಈ ರೀತಿಯ ಹಲ್ಲೆ ಮತ್ತು ದೌರ್ಜನ್ಯ ತೀವ್ರ ಖಂಡನಿಯ. ತಪ್ಪಿತಸ್ಥ ಪೊಲೀಸರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಕುಲಕರ್ಣಿ, ಕಾರ್ಯದರ್ಶಿ ಐ.ಸಿ.ನಾಯ್ಕ, ಸಂಘದ ಪ್ರಮುಖರಾದ ವಿ.ಆರ್.ಹೆಗಡೆ, ಎಂ.ಸಿ.ಹೆಗಡೆ, ವಿಶ್ವನಾಥ ಲಕ್ಷಟ್ಟಿ, ರಾಘವೇಂದ್ರ ಗಡೆಪ್ಪನವರ್, ಶಂಕ್ರಪ್ಪ ಶಾಲಿ, ಮುಸ್ತಾಕ್ ಶೇಖ್, ಮಮ್ತಾಜ್ ಶೇಖ, ಸುಮಿತ್ರಾ.ಕೆ, ರತ್ನಾದೀಪ, ಆಪ್ರೀನ್ ಕಿತ್ತೂರು, ಮಂಜುನಾಥ ಬಂಡಿವಡ್ಡರ್, ನಾಗರಾಜ ಮೊದಲಾದವರು ಇದ್ದರು.