ಅಂಕೋಲಾ: ಅಂಕೋಲೆಯ ಕರ್ನಾಟಕ ಸಂಘದ ಆಶ್ರಯದಲ್ಲಿ ಖ್ಯಾತ ಕವಯತ್ರಿ- ಲೇಖಕಿ ಶ್ರೀದೇವಿ ಕೆರೆಮನೆ ಅವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ನ.30 ರಂದು ಗುರುವಾರ ಸಂಜೆ 4 ಗಂಟೆಗೆ ಕನ್ನಡ ಭವನದಲ್ಲಿ ಜರುಗಲಿದೆ.
‘ನಗುವಿಗೊಂದು ಧನ್ಯವಾದ’ ಕವನ ಸಂಕಲನ, ‘ಕಾಡುವ ಗರ್ಭ’ ಅಂಕಣ ಬರಹ ಮತ್ತು ‘ಅಂಗೈಯೊಳಗಿನ ಬೆಳಕು’ ಪುಸ್ತಕಾವಲೋಕನ ಈ ಮೂರು ಕೃತಿಗಳನ್ನು ಖ್ಯಾತ ಕಥೆಗಾರ ಡಾ. ರಾಮಕೃಷ್ಣ ಗುಂದಿ ಬಿಡುಗಡೆ ಮಾಡಲಿದ್ದು, ಕರ್ನಾಟಕ ಸಂಘದ ಗೌರವಾಧ್ಯಕ್ಷ ಪ್ರೊ. ಕೆ.ವಿ. ನಾಯಕ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಶ್ರೀಧರ ನಾಯಕ ಕೃತಿ ಪರಿಚಯ ಮಾಡಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ಉಪಸ್ಥಿತರಿರಲಿದ್ದಾರೆ.
ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕನ್ನಡ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಕರ್ನಾಟಕ ಸಂಘದ ಗೌರವಾಧ್ಯಕ್ಷ ಪ್ರೊ. ಕೆ.ವಿ.ನಾಯಕ, ಕವಯತ್ರಿ ಶ್ರೀದೇವಿ ಕೆರೆಮನೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಅಪರೂಪದ ಸಾಹಿತ್ಯದ ಮೂಲಕ ಗುರುತಿಸಿಕೊಂಡಿದ್ದು, ಈ ಮೂರು ಕೃತಿಗಳು ಓದುಗರ ಮನ ಗೆಲ್ಲಲಿವೆ ಎಂದರು. ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್, ಪದಾಧಿಕಾರಿಗಳಾದ ವಿಠ್ಠಲ ಗಾಂವಕರ್, ಡಾ. ವಿನಾಯಕ ಹೆಗಡೆ, ರವೀಂದ್ರ ಕೇಣಿ, ರಾಜೇಶ ನಾಯಕ, ಪ್ರವೀರ ನಾಯಕ, ಶ್ರೀಧರ ನಾಯಕ, ಡಾ. ಅನುಪಮಾ ನಾಯ್ಕ ಇದ್ದರು. ಕಾರ್ಯದರ್ಶಿ ಮಹೇಶ ನಾಯಕ ಸ್ವಾಗತಿಸಿದರು. ಖಜಾಂಚಿ ಎಸ್.ಆರ್. ನಾಯಕ ವಂದಿಸಿದರು.