ಯಲ್ಲಾಪುರ: ರಸ್ತೆ ಪಕ್ಕ ನಿಲ್ಲಿಸಿಟ್ಟ ಬೈಕ್ ಕಳವು ಮಾಡಿದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಇಡಗುಂದಿ ಸಮೀಪದ ಹಂಸನಗದ್ದೆ ಕೂಡಿಗೆಯ ನಾಗೇಂದ್ರ ಸುರೇಶ ಸಿದ್ದಿ ಬಂಧಿತ ವ್ಯಕ್ತಿಯಾಗಿದ್ದು, ಈತ ಕಳೆದ ನ.25 ರಂದು ಪಟ್ಟಣದ ಕಾಳಮ್ಮನಗರ ರಸ್ತೆಯ ಪಕ್ಕ ನಿಲ್ಲಿಸಿದ್ದ ಶ್ರೀಪಾದ ಹೆಗಡೆ ಕಲಗದ್ದೆ ಎಂಬುವರ ಹೀರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಕದ್ದೊಯ್ದಿದ್ದ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಾಗೇಂದ್ರನನ್ನು ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಎಸ್.ಪಿ ವಿಷ್ಣುವರ್ಧನ್, ಎ.ಎಸ್.ಪಿ ಜಯಕುಮಾರ, ಡಿ.ವೈ.ಎಸ್.ಪಿ ಗಣೇಶ ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ನಸ್ರೀನ್ ತಾಜ್, ಶ್ಯಾಮ ಪಾವಸ್ಕರ್, ಸಿಬ್ಬಂದಿ ಮಹಮ್ಮದ್ ಶಫಿ, ಬಸವರಾಜ್ ಹಗರಿ, ಧರ್ಮರಾಜ, ಕೃಷ್ಣ ಮಾತ್ರೋಜಿ, ಗಿರೀಶ ಲಮಾಎ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.