ಹೊನ್ನಾವರ: ತಾಲೂಕಿನ ಮಂಕಿಯ ಅನಂತವಾಡಿ ಸಮೀಪದ ಕೋಟ, ತುಂಬೇಬೀಳು ರೈಲ್ವೇ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿ, ಹೊನ್ನಾವರ ಉಳಿಸಿ, ಬೆಳೆಸಿ ಜನಪರ ವೇದಿಕೆ ಮತ್ತು ಇತರೆ ಸಂಘಟನೆಗಳು ರೈಲ್ವೇ ಗೇಟ್ ಸಮಸ್ಯೆ ಸರಿಪಡಿಸಲು ಆಗ್ರಹಿಸಿ ತಹಸೀಲ್ದಾರ್ ಅವರ ಕಛೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಮ್ಮೂರಿನ ರೈಲ್ವೆ ಗೇಟ್ ಸಮಸ್ಯೆ ಬಗ್ಗೆ ವಿವರವಾಗಿ ಎಲ್ಲಾ ಇಲಾಖೆಗಳಿಗೂ ಹಾಗೂ ಸಂಬಂಧ ಪಟ್ಟವರಿಗೂ ಮನವಿ ನೀಡಿರುತ್ತೇವೆ. ಆದರೆ ಕಳೆದ ಹಲವಾರು ವರ್ಷಗಳಿಂದ ಈ ರೈಲ್ವೆ ಗೇಟ್ ಸಮಸ್ಯೆಯಿಂದ ಸರಿಯಾಗಿ ಶಾಲೆಗೆ ಮಕ್ಕಳನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಯಾವುದೇ ಶಾಲಾ ಬಸ್ ಈ ಗೇಟ್ ಒಳಗಡೆ ಬರಲು ಹಿಂಜರಿಯುತ್ತಾರೆ ಹಾಗೂ ಯಾವುದೇ ಅತೀ ಜರೂರು ಅಂಬುಲೆನ್ಸ್ ಹಾಗೂ ಜನಗಳಿಗೆ ಆರೋಗ್ಯ ಸಮಸ್ಯೆ ಆದ ಸಂದರ್ಭದಲ್ಲಿ ಹಾಗೂ ಕೂಲಿ ಕೆಲಸಕ್ಕೆ ಹಾಗೂ ಸರ್ಕಾರಿ ಕೆಲಸಕ್ಕೂ ಸಹ ಹೋಗಲು ಪ್ರತಿ ರೈಲ್ವೆ ಬರುವಾಗಲು ಒಂದು ಗಂಟೆಗೂ ಅಧಿಕ ಸಮಯ ಇಲ್ಲಿ ಕಾಯಬೇಕಾಗುತ್ತದೆ. ಹಾಗೂ ದಿನಾಲೂ 60ಕ್ಕಿಂತಲೂ ಅಧಿಕ ರೈಲು ಓಡಾತ್ತವೆ. ಗೇಟ್ ಬಳಿ ಹಲವಾರು ಆಕಳು ಹಾಗೂ ಇನ್ನಿತರ ಪ್ರಾಣಿಗಳು ಈಗಾಗಲೇ ಜೀವ ಕಳೆದುಕೊಂಡಿವೆ.
ಇಲ್ಲಿನ ಜನರು ಈ ರೀತಿ ನಿತ್ಯ ಈ ರೈಲ್ವೆ ಗೇಟ್ ನಿಂದ ಹಿಂಸೆ ಅನುಭವಿಸುತ್ತಿದ್ದು, ಕೊಂಕಣ ರೈಲ್ವೆ ಇಲಾಖೆಗೆ ಕೂಡಲೇ ರೈಲ್ವೆ ಮೇಲ್ಸೇತುವೆ ಮಾಡಲು ಆದೇಶ ನೀಡುವಂತೆ ವಿನಂತಿಸಿದ್ದಾರೆ.
ರೈಲ್ವೆ ಮೇಲ್ಸೇತುವೆ 31 ಮಾರ್ಚ್ 2024ರೊಳಗಡೆ ಪೂರ್ಣಗೊಳಿಸದಿದ್ದರೆ, ಎಪ್ರಿಲ್ 15, 2024ರ ನಂತರ ರೈಲ್ವೆ ಗೇಟಿನಲ್ಲಿ ಸಾರ್ವಜನಿಕರು ರೈಲು ನಿಲ್ಲಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ, ರೈಲ್ವೆ ಮೇಲ್ಸೇತುವೆ ಆಗುವವರೆಗೆ ನಮ್ಮ ಗ್ರಾಮದ ಎಲ್ಲಾ ಬೂತ್ ಗಳಲ್ಲಿ ಯಾವುದೇ ಲೋಕಸಭೆ/ವಿಧಾನಸಭೆ/ ಜಿಲ್ಲಾ ಪಂಚಾಯತ/ ಗ್ರಾಮಪಂಚಾಯತ ಚುನಾವಣೆ ಬಂದರು ಅದನ್ನು ನಾವು ಮತದಾನ ಬಹಿಸ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.