ಹೊನ್ನಾವರ: ರೈತರು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಫ್ರೂಟ್ಸ ತಂತ್ರಾಂಶದಲ್ಲಿ ರೈತರ ಗುರುತಿನ ಸಂಖ್ಯೆ (ಎಫ್.ಐ.ಡಿ) ಕಡ್ಡಾಯ ನೋಂದಣಿ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಶ್ರೀಮತಿ ಪುನೀತಾ ಎಸ್ ಬಿ ತಿಳಿಸಿದ್ದಾರೆ.
ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ, ಕನಿಷ್ಠ ಬೆಂಬಲ ಬೆಲೆ, ಬೆಳೆ ಸಾಲ ಯೋಜನೆ ಹಾಗೂ ಕೃಷಿ ಸಂಬ೦ಧಿ ಸಹಾಯಧನ ಸೌಲಭ್ಯ ಪಡೆಯಲು ತಮ್ಮ ಜಮೀನು ಸರ್ವೆ ನಂಬರ್‌ಗೆ ಆಧಾರ ಜೋಡಣೆ ಅವಶ್ಯಕವಾಗಿದೆ. ತಾಲೂಕಿನಲ್ಲಿ ಈವರೆಗೂ ನೋಂದಣಿ ಮಾಡದೆ ಇರುವ ರೈತರು ತುರ್ತಾಗಿ ಆಧಾರ ಕಾರ್ಡ್, ಬ್ಯಾಂಕ ಪಾಸ ಪುಸ್ತಕ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಎಸ್.ಸಿ ಮತ್ತು ಎಸ್.ಟಿ ರೈತರಿಗೆ ಮಾತ್ರ) ಪಹಣಿ ಪತ್ರಿಕೆ ಪ್ರತಿಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಆಡಳಾತಾಧಿಕಾರಿ ಕಾರ್ಯಾಲಯ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಗಳ ಕಚೇರಿಗಳಲ್ಲಿ ರೈತರ ಗುರುತಿನ ಸಂಖ್ಯೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.