Slide
Slide
Slide
previous arrow
next arrow

ಅರಣ್ಯ ಸಿಬ್ಬಂದಿಗಳ ಒಕ್ಕಲೆಬ್ಬಿಸುವ ಕಾರ್ಯ: ಅರಣ್ಯ ಹೋರಾಟಗಾರ ಸಂಘದ ತೀವ್ರ ಅಸಮಧಾನ

300x250 AD

ಹೊನ್ನಾವರ: ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ, ಹೊಸಗೋಡ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿಗಳು ಒಕ್ಕಲೆಬ್ಬಿಸಿದ ಪ್ರಕ್ರೀಯೆಯಲ್ಲಿ ವರ್ತಿಸಿದ ರೀತಿ ಮತ್ತು ನೀತಿ ಕಾನೂನಿಗೆ ವ್ಯತಿರಿಕ್ತ. ಅರಣ್ಯ ಸಿಬ್ಬಂದಿಗಳ ವರ್ತನೆ ಅಮಾನವಿಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿಕ್ಕನಗೋಡ ಗ್ರಾಮ ಪಂಚಾಯಿತಿಯ, ಹೊಸಗೋಡ ಗ್ರಾಮದ ಲಕ್ಷ್ಮಿ ತಿಮ್ಮ ಗೌಡ ಅವರ ಅತಿಕ್ರಮಣ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ದೌರ್ಜನ್ಯ ವೆಸಗಿರುವ ಸ್ಥಳಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮತ್ತು ಹೊನ್ನಾವರ ತಾಲೂಕ ಅಧ್ಯಕ್ಷ ಚಂದ್ರಕಾಂತ ಕೋಚರೇಕರ್ ಅವರ ನೇತ್ರತ್ವದಲ್ಲಿ ಹೋರಾಟಗಾರರ ವೇದಿಕೆಯ ನಿಯೋಗವು ಬೇಟಿಕೊಟ್ಟು, ಸ್ಥಳ ಪರಿಶಿಲಿಸಿ, ನಂತರ ಅಭಿಪ್ರಾಯ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ನಿರ್ದಿಷ್ಟ ಗಡಿ ಬೇಲಿಯ ಒಳಗಡೆ 15-20 ವರ್ಷದ ಗೇರು, 6-7 ವರ್ಷದ ಅಡಿಕೆಗಿಡ ಇರುವಂತಹ ಪ್ರದೇಶದಲ್ಲಿ, ಅಲ್ಪಾವಧಿ ಬೆಳೆಯ ಗಿಡ-ಮರ ಕಡಿದಿರುವುದು ನಿಯೋಗದ ಗಮನಕ್ಕೆ ಬಂದಿದ್ದು ಇರುತ್ತದೆ.

ಅರಣ್ಯವಾಸಿ ಕುಟುಂಬದ ಮಹಿಳಾ ಸದಸ್ಯರೊಂದಿಗೆ ರಾತ್ರಿ ವೇಳೆ ಅಸಭ್ಯವಾಗಿ ವರ್ತಿಸಿರುವುದು, ಅಪ್ರಾಪ್ತ ವಯಸ್ಸಿನ ಅರಣ್ಯವಾಸಿ ಕುಟುಂಬದ ಹುಡಗನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವ ಕ್ರಮ ಅರಣ್ಯ ಸಿಬ್ಬಂದಿಗಳ ಕರ್ತವ್ಯ ಚ್ಯುತಿ ಮತ್ತು ಕಾನೂನು ಬಾಹಿರ ಕೃತ್ಯವೆಂದು ಅವರು ಆಪಾದಿಸಿದ್ದಾರೆ.

300x250 AD

ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯಕ್ಕೆ ಸ್ಥಳೀಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅರಣ್ಯವಾಸಿ ಕುಟುಂಬಗಳ ಮೇಲೆ, ಅಸಭ್ಯ ಹಾಗೂ ಕ್ರಿಮಿನಲ್ ಚಟುವಟಿಕೆ ವೆಸಗಿದ ಅರಣ್ಯ ಸಿಬ್ಬಂದಿಗಳ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಬೇಕೆಂದು ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ಅವರು ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ರಾಮಾ ಮರಾಠಿ ಯಲಕೊಟಗಿ, ಮಹೇಶ ನಾಯ್ಕ ಸಾಲ್ಕೋಡ, ವಿನೋಧ ನಾಯ್ಕ, ಸಂಕೇತ ನಾಯ್ಕ, ಸುರೇಶ ನಾಯ್ಕ ನಗರಬಸ್ತಿಕೇರಿ, ಸುರೇಶ ಗೌಡ, ನಾಗರಾಜ ಕೃಷ್ಣ ಹೆಗಡೆ, ಶ್ರೀಧರ ಶೆಟ್ಟಿ, ಹೇರಂಬ ಗೌಡ, ಸುರೇಶ ಗೌಡ, ಉಮೇಶ ನಾಯ್ಕ ಹಾಗೂ ನೂರಾರು ಅರಣ್ಯವಾಸಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top