ಶಿರಸಿ: ಸಾರಾ ಸಂಸ್ಥೆಯ ವತಿಯಿಂದ ಡಾಕ್ಟರ್ ಗಿರಿಧರ್ ಹಾಗೂ ಧನುಷ್ ಕುಮಾರ್ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಸಹ್ಯಾದ್ರಿ ಸಂವಾದ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ನಮ್ಮ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬುದರ ಕುರಿತು ಅರಿವು ಮೂಡಿಸಲಾಯಿತು. ನಮ್ಮ ಸುತ್ತಲಿನ ಸಸ್ಯ ಸಂಪತ್ತುಗಳ ಸಂರಕ್ಷಣೆ ಪ್ರಾಣಿಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳು ಇವುಗಳ ಸಂರಕ್ಷಣೆಯ ಕುರಿತಾದ ಮಾಹಿತಿಯನ್ನು ಅತ್ಯಾಕರ್ಷಕವಾದ ಸಂಚಾರಿ ಭಿತ್ತಿಚಿತ್ರ ಪ್ರದರ್ಶನದ ಮೂಲಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಧನುಷ್ ಕುಮಾರ್, ಐಷಾರಾಮಿ ಬದುಕನ್ನು ಬಿಟ್ಟು ಸರಳ ಜೀವನ ನಡೆಸಿದರೆ ಸಮಾಜಕ್ಕೆ ಉಪಯುಕ್ತ ಎಂಬ ಕಿವಿ ಮಾತನ್ನು ಹೇಳಿದರು. ಸಹ್ಯಾದ್ರಿ ಸಂವಾದ ಕಾರ್ಯಕ್ರಮದ ಪರಿಪೂರ್ಣ ಪ್ರಯೋಜನವನ್ನು ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಪಡೆದರು.