ಯಲ್ಲಾಪುರ: ತಾಲೂಕಿನ ಗುಳ್ಳಾಪುರ ರಾಷ್ಟ್ರೀಯ ಹೆದ್ದಾರಿ 63 ಪಕ್ಕ ಇರುವ ವಿಶ್ವಾಸ ಜನರಲ್ ಸ್ಟೋರ್ಸ್ನ ಹೆಂಚು ತೆಗೆದು ಕಳ್ಳತನ ಮಾಡಿದ ಘಟನೆ ನಡೆದಿದ್ದು,ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶ್ವಾಸ ಜನರಲ್ ಸ್ಟೋರ್ಸ್ ಮೇಲ್ಛಾವಣಿಯ ಹೆಂಚು ತೆಗೆದು,ಸಿಮೆಂಟ್ ಸೀಟಿನ ಮುಚ್ಚಿಗೆ ಒಡೆದು ಅಂಗಡಿಯೊಳಕ್ಕೆ ನುಗ್ಗಿ 38 ಸಾವಿರ ರೂ. ಕಳ್ಳತನ ಮಾಡಿದ್ದಾರೆಂದು ಜಿ.ಆರ್. ಭಟ್ ದೂರನ್ನು ದಾಖಲಿಸಿದ್ದಾರೆ.