ಹೊನ್ನಾವರ: ತಾಲೂಕಿನ ಖರ್ವಾ ಶ್ರೀಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ನೂತನ ಭೋಜನಾಲಯದ ಉದ್ಘಾಟನಾ ಸಮಾರಂಭ ನೆರವೇರಿತು.
ರಿಬ್ಬನ್ ಕತ್ತರಿಸುವುದರ ಮೂಲಕ ಶಾಲೆಯ ಪೂರ್ವ ವಿದ್ಯಾರ್ಥಿ ಖಲೀಲ್ ಶೇಖ್ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ರಾಮಚಂದ್ರ. ಎನ್.ಭಟ್‌ರವರು ನೂತನ ಭೋಜನಾಲಯ ಉದ್ಘಾಟಿಸಿದರು. ಶಾಲೆಯಲ್ಲಿ ಶಾರದಾ ಪೂಜೆಯನ್ನು ನೆರವೇರಿಸಲಾಯಿತು. ಭೋಜನಾಲಯದ ಸಂಪೂರ್ಣ ವೆಚ್ಚ ಭರಿಸಿದ ಖಲೀಲ್ ಶೇಖ್ ಅವರನ್ನು ಶಾಲಾ ಬಳಗದವರಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೃಷ್ಣಮೂರ್ತಿ ಭಟ್ಟ ಶಿವಾನಿ, ದಾನಿಗಳ ಕೊಡುಗೆಯನ್ನು ಸ್ಮರಿಸಿ ಅಭಿನಂಧಿಸಿದರು. ಇನ್ನೋರ್ವ ಅತಿಥಿಗಳಾದ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಾಹಕ ಮೋಹನ ನಾಯ್ಕ ಮಾತನಾಡಿ, ದಾನಿಗಳ ಕೊಡುಗೆಗಳಿಂದ ನೀವು ಪ್ರೇರಣೆಗೊಂಡು,ಮುಂದಿನ ದಿನಗಳಲ್ಲಿ ನೀವು ಸಹ ಕಲಿತ ಶಾಲೆಗೆ ನೆರವು ನೀಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ವೇದಿಕೆಯಲ್ಲಿ ಶಾಲಾ ಮುಖ್ಯಾಧ್ಯಪಕ ಎಸ್. ಎಲ್.ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎನ್.ನಾಯ್ಕ, ನಿರ್ದೇಶಕ ಗುರುನಾಥ ನಾಯ್ಕ, ಪೂರ್ವ ವಿದ್ಯಾರ್ಥಿ ಒಕ್ಕೂಟದ ಗೌರವ ಅಧ್ಯಕ್ಷ ಟಿ.ಎಚ್.ಗೌಡ, ಅಧ್ಯಕ್ಷ ಆರ್.ಟಿ.ಹೆಬ್ಬಾರ್, ಕಾರ್ಯದರ್ಶಿ ಅನಂತ ಹೆಗಡೆ, ಉಪಾಧ್ಯಕ್ಷ ಸತ್ಯಪ್ಪ ನಾಯ್ಕ, ಸದಸ್ಯರಾದ ವೆಂಕಟರಮಣ ಹೆಗಡೆ, ಎಂ. ವಿ. ಹೆಗಡೆ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಪಿ.ಜಿ.ಹೆಗಡೆ ಮತ್ತು ಶಾಲಾ ಬಳಗದವರು, ಊರ ನಾಗರಿಕರು ಪೂರ್ವ ವಿದ್ಯಾರ್ಥಿಗಳು ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲರಿಗೆ ಲಘು ಉಪಹಾರ ನೀಡುವ ಭೋಜನಾಲಯಕ್ಕೆ ಚಾಲನೆ ನೀಡಲಾಯಿತು.