ಕುಮಟಾ: ತಾಲೂಕಿನ ಬರ್ಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಕೆಳಭಾಗದಲ್ಲಿದ್ದ ಗೂಡಂಗಡಿ ಒಂದಕ್ಕೆ ಲಾರಿ ನುಗ್ಗಿದ್ದು, ಗೂಡಂಗಡಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಬರ್ಗಿಯ ಮಂಜುನಾಥ ಪಟಗಾರ ಎಂಬುವವರಿಗೆ ಸೇರಿದ್ದ ಗೂಡಂಗಡಿ ಇದಾಗಿದ್ದು, ಕುಮಟಾ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಲಾರಿ ಚಾಲಕ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿಯಿಂದ ಸಾಕಷ್ಟು ದೂರಲ್ಲಿ ಇದ್ದ ಗೂಡಂಗಡಿಗೆ ತನ್ನ ಲಾರಿಯನ್ನ ನುಗ್ಗಿಸಿದ್ದಾನೆ. ಈ ವೇಳೆ ಅಂಗಡಿಯ ಒಳಗಡೆ ಕುಳಿತ್ತಿದ್ದ ಮಾಲೀಕ ಮಂಜುನಾಥ ಪಟಗಾರ ಸೇರಿ ಅಲ್ಲೆ ಕುಳಿತ್ತಿದ್ದ ನಾಲ್ಕಕ್ಕೂ ಹೆಚ್ಚು ಮಂದಿ ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂಗಡಿ ಒಳಗೆ ಲಾರಿ ನುಗ್ಗಿದ್ದು, ಅಂಗಡಿ ಜಖಂ ಆಗಿದ್ದು, ಲಾರಿ ಸಹ ಜಖಂ ಆಗಿದೆ. ಅಂಗಡಿಗೆ ಲಾರಿ ನುಗ್ಗಿರುವುದರಿಂದ ಐವತ್ತು ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿದ್ದು, ಅಪಘಾತಕ್ಕೆ ಕಾರಣವಾಗಿರುವ ಲಾರಿ ಚಾಕನನಿಗೆ ವಶಕ್ಕೆ ಪಡೆದುಕೊಂಡಿದ್ದಾರೆ.