Slide
Slide
Slide
previous arrow
next arrow

ಮುಂದಿನ ದಿನಗಳಲ್ಲಿ ಜಗತ್ತು ಔಷಧ ಮುಕ್ತವಾಗಲಿದೆ : ಡಾ.ಸಚಿನ್ ಪರಬ್

300x250 AD

ಶಿರಸಿ: ಮುಂದಿನ ದಿನಗಳಲ್ಲಿ ಜಗತ್ತು ಔಷಧ ಮುಕ್ತವಾಗಲಿದೆ. ಅದಕ್ಕೆ ಯೋಗ ಮತ್ತು ಆಹಾರದಲ್ಲಿ ನಿಯಂತ್ರಣ ಅಗತ್ಯ. ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿರುವುದು ಆರೋಗ್ಯ. ಶಾರೀರಿಕವಾಗಿ ಆರೋಗ್ಯವಾಗಿದ್ದರೆ, ದೇಹದ ಅವಯವ ಸದೃಢವಾಗಿದ್ದಲ್ಲಿ, ನಿದ್ರೆ, ಊಟ ಎಲ್ಲವೂ ಸಮವಾಗಿ ನಿಯಂತ್ರಿತವಾದ ಆರೋಗ್ಯ ಹೊಂದಲಿದ್ದೀರಿ ಎಂದು ಮಹಾರಾಷ್ಟ್ರ ಸರ್ಕಾರದ ಡಿಎಡಿಕ್ಷನ್ ಕೌನ್ಸಿಲ್ ಸದಸ್ಯ, ಅಂತರಾಷ್ಟ್ರೀಯ ಕಾರ್ಪೋರೇಟ್ ತರಬೇತುದಾರ ಮತ್ತು ಆರೋಗ್ಯ ಸಲಹೆಗಾರ ಡಾ.ಸಚಿನ್ ಪರಬ್ ಮುಂಬೈ ಹೇಳಿದರು.

ಅವರು ಶುಕ್ರವಾರ ಇಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದ ಸಧ್ಬಾವನಾ ಸಭಾಭವನದಲ್ಲಿ ಸ್ಥಳೀಯ ರೋಟರಿ ಮತ್ತು ಇನ್ನರ್‌ವ್ಹೀಲ್ ಕ್ಲಬ್, ಲಯನ್ಸ್ ಕ್ಲಬ್, ಸಾಂತ್ವನ ಮಹಿಳಾ ವೇದಿಕೆ, ಆದರ್ಶ ವನಿತಾ ಸಮಾಜ, ಯುಥ್ ಫಾರ್ ಸೇವಾ, ಅದರ್ಶ ಭಗಿನಿ ಬಳಗ, ಗಣೇಶ ನೇತ್ರಾಲಯ, ಗುರುಸಿದ್ದೇಶ್ವರ ಮಹಿಳಾ ಮಂಡಳಿ, ಗೌರಿ ಮಹಿಳಾ ಮಂಡಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉ.ಕ.ಯೋಗ ಫೆಟರೇಶನ್, ಸೀನಿಯರ್ ಛೇಂಬರ್ ಶಿರಸಿ, ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಿರಸಿ ಸಂಯುಕ್ತವಾಗಿ ಆಯೋಜಿಸಿರುವ ಸ್ವಸ್ಥ ಮನಸ್ಸು, ಸದೃಢ ಆರೋಗ್ಯ ವಿಶೇಷ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಮಾನಸಿಕ ಸದೃಢತೆ ಎಂದರೆ ಉತ್ತಮ ಯೋಚನೆ ಮಾಡುವುದಾಗಿದೆ. ಮಾನಸಿಕವಾಗಿ ಸ್ಥಿರವಾಗಿರಬೇಕು. ಸ್ಥಿರ ಪ್ರಜ್ಞೆ ಇರುವವರಿಗೆ ಅಪಮಾನದ ಫೀಲಿಂಗ್ ಆಗುವುದಿಲ್ಲ. ಮಾನಸಿಕ ವ್ಯಕ್ತಿಯ ಮುಖ್ಯ ಲಕ್ಷಣ ಅವನಿಗೆ ಆತ ಮೆಂಟಲ್ ಎಂದು ಅರ್ಥವಾಗುವುದಿಲ್ಲ. ಇಂದಿನ ಜಗತ್ತು ಸೋಶಿಯಲ್ ಮೀಡಿಯಾ ಯುಗವಾಗಿದೆ. ಸಾ,ಆಜಿಕ ತಾಣಗಳಲ್ಲಿ ಸಾವಿರ ಜನರನ್ನು ಪರಿಚಯಿಸಿಕೊಳ್ಳುತ್ತೇವೆ. ಆದರೆ ಅಕ್ಕಪಕ್ಕದವರನ್ನು ಪರಿಚಯಿಸಿಕೊಂಡಿರುವುದಿಲ್ಲ. ಸಾಮಾಜಿಕ ಸ್ವಾಸ್ಥ್ಯ ಬಹುಮುಖ್ಯ ಎಂದರು.

ಆಧ್ಯಾತ್ಮ ಆರೋಗ್ಯದ ಅಡಿಪಾಯವಾಗಿದೆ. ಆಧ್ಯಾತ್ಮ, ಪರಿಚಯ, ಯೋಚನೆ ಉತ್ತಮವಾಗಿದ್ದರೆ ಎಲ್ಲವೂ ಉತ್ತಮವಾಗಿರಲಿದೆ. ಯಾವಾಗ ಆತ್ಮವಿಶ್ವಾಸ ಎಷ್ಟು ಹೆಚ್ಚುತ್ತ ಸಾಗುತ್ತದೆಯೋ ಅಷ್ಟು ಆರೋಗ್ಯವಂತರಾಗುತ್ತಾರೆ. ನಾನು ಕಲಿಸುವವನಲ್ಲ, ನಿಮ್ಮೊಂದಿಗೆ ಸಂವಾದ ಮಾಡುವವನು. ನಿಮ್ಮಿಂದ ನನಗೇನು ಸಿಗಲಿದೆ ಅದನ್ನು ತಿಳಿಯುತ್ತೇನೆ. ನನ್ನಿಂದ ನಿಮಗೇನು ಲಾಭವಾಗಲಿದೆ ತಿಳಿಯಬೇಕಿದೆ ಎಂದು ಹೇಳಿದರು.

300x250 AD

ಶಿರಸಿಯ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕ ಬಿ.ಕೆ.ವೀಣಾಜಿ,ಪರಿಚಯ ಹಾಗೂ ಪ್ರಸ್ತಾವನೆ ನಡೆಸಿದರು.

Share This
300x250 AD
300x250 AD
300x250 AD
Back to top