ಸಿದ್ದಾಪುರ: ಶ್ರೀರಾಮಕೃಷ್ಣಾಶ್ರಮದ ಶ್ರೀರಾಮಕೃಷ್ಣ ವಿದ್ಯಾಶಾಲಾ ಮೈಸೂರು ಸ್ವಾಮಿ ಶಾಂಭವಾನಂದಜಿ ಇವರ ಸ್ಮರಣಾರ್ಥ 50ನೇ ಅಂತರ್ ಪ್ರೌಢಶಾಲೆ ಸಾಮಾನ್ಯ ಜ್ಞಾನ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯು ರಾಜ್ಯದ ಆಯ್ದ ಪ್ರೌಢಶಾಲೆಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ನಮ್ಮ ಶಿಕ್ಷಣ ಪ್ರಸಾರಕ ಸಮಿತಿಯ ಸಿದ್ಧಿವಿನಾಯಕ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆ ಹಾಗೂ ಸಿದ್ಧಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲೆಗಳಲ್ಲಿ ನ.05ರಂದು ಆಯೋಜಿಸಲು ನಿರ್ಧರಿಸಲಾಗಿದೆ.
ಈ ಸ್ಪರ್ಧೆಯಲ್ಲಿ ತಾಲೂಕಿನ ಎಲ್ಲ ಪ್ರೌಢಶಾಲೆಗಳಿಂದ ಒಟ್ಟು 349 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಸ್ಪರ್ಧಾ ವಿಜೇತರಿಗೆ ಮತ್ತು ಉತ್ತಮ ಅಂಕಗಳಿಸಿದ ಪ್ರೌಢಶಾಲೆಗಳನ್ನು ಸಭಾಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುವುದು ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಶಶಿಭೂಷಣ ವಿ.ಹೆಗಡೆ ದೊಡ್ಮನೆ ತಿಳಿಸಿದ್ದಾರೆ.