ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 8 ಫಲಾನುಭವಿ ಆಧಾರಿತ ಯೋಜನೆಗಳನ್ನು ‘ಸೇವಾಸಿಂಧು ಯೋಜನೆ’ಯಿಂದ ಡಿಬಿಟಿ (ನೇರ ನಗದು ವರ್ಗಾವಣೆ) ತಂತ್ರಾಶದಡಿ ಅನುಷ್ಠಾನಗೊಳಿಸಲಾಗಿರುವ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿಕಲಚೇತನರು sevasindhu.karnataka.gov.in ಪೋರ್ಟಲ್‌ನ ಮೂಲಕ ನ.15ರೊಳಗಾಗಿ ಅರ್ಜಿ ಸಲ್ಲಿಸಬೇಕು. ನೋಂದಣಿ ಮಾಡಿಕೊಂಡ ಅರ್ಜಿಯನ್ನು ಆಯಾ ತಾಲೂಕಿ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕಾರವಾರ: ಶಶಿರೇಖಾ ವಿ.ಮಾಳಸೇಕರ, ಅಂಕೋಲಾ: ಕವಿತಾ ನಾಯ್ಕ, ಕುಮಟಾ: ಸುಧಾ ಭಟ್ಟ, ಹೊನ್ನಾವರ: ಶೈಲಾ ವಿ.ನಾಯ್ಕ, ಭಟ್ಕಳ: ಮೋಹನ ದೇವಾಡಿಗ, ಶಿರಸಿ: ಸ್ನೇಹಾ ಅಂಬಿಗ, ಸಿದ್ದಾಪುರ: ಶ್ರೀಧರ ಟಿ.ಹರ್ಗಿ, ಯಲ್ಲಾಪುರ: ಸಲೀಂ ಖುದ್ದುಸ್ ಶೇಖ್, ಮುಂಡಗೋಡ: ಶೋಭಾ ಭಟ್ಕಳ, ಹಳಿಯಾಳ: ಸುನೀತಾ ಶಹಾಪೂರಕರ, ಜೊಯಿಡಾ: ರಾಜೇಸಾಬ್ ಡಿ.ತಹಶೀಲ್ದಾರ ಹಾಗೂ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.