Slide
Slide
Slide
previous arrow
next arrow

ನ.6 ರಿಂದ ಬೇಸಿಕ್ ಜಲಸಾಹಸ ಕ್ರೀಡಾ ತರಬೇತಿ ಶಿಬಿರ

300x250 AD

ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಂಗ ಸಂಸ್ಥೆಯಾದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ 2023-24 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 16 ರಿಂದ 29 ವರ್ಷದ ವಯೋಮಿತಿಯೊಳಗಿನ ಯುವಕ ಯುವತಿಯರಿಗಾಗಿ 10 ದಿನಗಳ ಎರಡು ಬೇಸಿಕ್ ಜಲಸಾಹಸ ಕ್ರೀಡಾ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡಿದೆ.

ಮೊದಲ ಶಿಬಿರವು ನ.6 ರಿಂದ ನ.15 ರವರೆಗೆ ಹಾಗೂ ಎರಡನೇ ಶಿಬಿರವು ನ.18ರಿಂದ ನ.27ರವರೆಗೆ ನಡೆಸಲಾಗುತ್ತದೆ. ತಾಲೂಕಿನ ಸದಾಶಿವಗಡದ ಕಾಳಿ ನದಿ ದಡದಲ್ಲಿರುವ ಜನರಲ್ ತಿಮ್ಮಯ್ಯ ಸಾಸಹ ಅಕಾಡೆಮಿಯ ಜಲ ಸಾಹಸ ಕ್ರೀಡಾ ಕೇಂದ್ರದಲ್ಲಿ ಈ ತರಬಬೇತಿಗಳು ನಡೆಯಲಿವೆ. ಪ್ರತಿ ತರಬೇತಿ ಶಿಬಿರದಲ್ಲಿ 50 ಜನರಿಗೆ ಮಾತ್ರ ಅವಕಾಶವಿದ್ದು ಆಸಕ್ತರು ನ.4 ರೊಳಗೆ ತಮ್ಮ ಹೆಸರನ್ನು ವ್ಯವಸ್ಥಾಪಕರು ಮತ್ತು ಹಿರಿಯ ತರಬೇತಿ ಶಿಕ್ಷಕರಾದ ಪ್ರಕಾಶ ಹರಿಕಂತ್ರ (ಮೊ.ಸಂ: +77603 65079) ಇವರಲ್ಲಿ ನೊಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಜ್ಜಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top