ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ಬೃಹತ್ ಕಂಟೇನರ್ ವಾಹನದ ವ್ಹೀಲ್ ಜಾಮ್ ಆದ ಪರಿಣಾಮ ಟೈರ್‌ನಿಂದ ಹೊಗೆ ಬರಲಾರಂಭಿಸಿ ಬ್ಲಾಸ್ಟ್ ಆಗುವ ಹಂತ ತಲುಪಿದ ಘಟನೆ ನಡೆದಿದೆ.
ಕುಮಟಾ ಮಾರ್ಗದಿಂದ-ಭಟ್ಕಳ ಮಾರ್ಗವಾಗಿ ಸಂಚರಿಸುತ್ತಿದ್ದ ಕಂಟೆನರ್ ವಾಹನ ಗೇರುಸೊಪ್ಪ ವೃತ್ತ ಸಮೀಪಿಸುತ್ತಿದ್ದಂತೆ ವಿಲ್ ಜಾಮ್ ಆಗಿತ್ತು. ಟೈರ್ ರಸ್ತೆಗೆ ಸಿಲುಕಿ ಏಕಾಎಕಿ ಹೊಗೆ ಬರಲಾರಂಭಿಸಿತ್ತು. ವಾಹನ ರಸ್ತೆ ಮದ್ಯೆ ನಿಂತ ಪರಿಣಾಮ ಕೆಲಕಾಲ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇತರ ವಾಹನ ಸವಾರರು, ಪಾದಾಚಾರಿಗಳು ಕಂಟೇನರ್ ಚಾಲಕನಿಗೆ ಟೈರ್ ಜಾಮ್ ಆಗಿರುವ ಬಗ್ಗೆ ವಿಷಯ ತಿಳಿಸಿದರು.
ನಿರ್ವಾಹಕ ವಾಹನದಿಂದ ಇಳಿದು ಸಮಸ್ಯೆ ಅವಲೋಕಿಸಿದ್ದಾನೆ. ಆದರು ಪುನಃ ವಾಹನ ಚಲಾಯಿಸಿಕೊಂಡು ಮಿನಿವಿಧಾನ ಸೌಧದ ಎದುರುವರೆಗು ಹೋಗುತ್ತಿದ್ದು,ಇನ್ನೆನು ಟೈರ್ ಬ್ಲಾಸ್ಟ್ ಆಗುವ ಹಂತದಲ್ಲಿರುವಾಗ ಸ್ಥಳೀಯರು ಪೊಲೀಸರಗೆ ಮಾಹಿತಿ ನೀಡಿದ್ದು,ಪೊಲೀಸ್ ಸಿಬ್ಬಂದಿಗಳು ಸಂಚರಿಸುತ್ತಿದ್ದ ವಾಹನ ರಸ್ತೆ ಬದಿಯಲ್ಲಿರಸಲು ಸೂಚಿಸಿ ವಾಹನ ದುರಸ್ತಿ ನಡೆಸಿದ ನಂತರವೇ ಮುಂದೆ ತೆರಳುವಂತೆ ಚಾಲಕನಿಗೆ ಹೇಳಿದರು.