Slide
Slide
Slide
previous arrow
next arrow

ಆನ್ಲೈನ್ ವಿಚಾರ ಮಂಥನ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿ

300x250 AD

ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ 12 ವೇದಿಕೆಗಳಲ್ಲಿ ಒಂದಾದ ಸಮಾಜ ಸೇವೆ ಮತ್ತು ಆರೋಗ್ಯ ಶಿಕ್ಷಣ ಸೇವೆ ವೇದಿಕೆ ವತಿಯಿಂದ ಇತ್ತೀಚಿಗೆ ಟೆಲಿಗ್ರಾಮ್ ಆಪ್‌ನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಚರಿತ್ರೆ ಆಧಾರಿತವಾದ ರಸಪ್ರಶ್ನೆ ಕಾರ್ಯಕ್ರಮ ಮತ್ತು ಉಪನ್ಯಾಸ ಯಶಸ್ವಿಯಾಗಿ ನೆರವೇರಿತು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಸಂಪೂರ್ಣ ಜೀವನ ಚರಿತ್ರೆ ಆಧಾರಿತವಾದ ರಾಜ್ಯದ ಪ್ರತಿಭಾವಂತ ಶಿಕ್ಷಕರ ವಿಚಾರ ಮಂಥನದ 11 ವಿಷಯಗಳ ಕುರಿತಾದ ವಿಡಿಯೋಗಳನ್ನು ಸ್ಪರ್ಧೆಗೂ ಮೊದಲು ಸ್ಪರ್ಧಾಬಳಗದಲ್ಲಿ ವೀಕ್ಷಿಸಿ ಸ್ಪರ್ಧೆಯ ದಿನ ಗೂಗಲ್ ಫಾರ್ಮ್ ಮೂಲಕ ಅವುಗಳಲ್ಲಿ ನೀಡಿದ ಬಹು ಆಯ್ಕೆ ಪ್ರಶ್ನೆಗಳಿಗೆ ನಿಗದಿತ ವೇಳೆಯಲ್ಲಿ ಉತ್ತರಿಸುವ ವಿನೂತನ ಸ್ಪರ್ಧೆ ಅದ್ಭುತವಾದ ಮೂಡಿ ಬಂದಿತು. ಜೊತೆಗೆ ಉಪನ್ಯಾಸಕ ನಾಗರಾಜ ಬಿಜಗನಹಳ್ಳಿ ಟರ್ನಿಂಗ್ ಪಾಯಿಂಟ್ಸ್ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ 2000 ರೂ.ಗಳ ಬಹುಮಾನವನ್ನು ಶಿವರಾಜ ದುಂಡಗಿ ಪಡೆದರೆ, ದ್ವಿತೀಯ ನಗದು ಬಹುಮಾನ 1500 ರೂ.ಗಳನ್ನು ಕುಮುದಾ ಎ.ಎಸ್. ಹಾಗೂ ತೃತೀಯ ನಗದು ಬಹುಮಾನ 1000 ರೂ.ಗಳನ್ನು ಸೈಯದ್ ಮೊಹಮ್ಮದ್ ಖೇಜರ್ ಪಡೆದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಸೇವೆ ಮತ್ತು ಆರೋಗ್ಯ ಶಿಕ್ಷಣ ಸೇವೆ ವೇದಿಕೆಯ ಮುಖ್ಯಸ್ಥ ಭಾರತಿ ನಲವಡೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೌಲ್ಯ ಆದರ್ಶಗಳನ್ನು ರಾಜ್ಯದ ಎಲ್ಲರ ಮನೆ ಮನಗಳಿಗೆ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನುಡಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಸದಾ ನಾವೀನ್ಯಯುತ ಕಾರ್ಯಕ್ರಮಗಳ ಚಿಂತಕರಾದ ಪಿ.ಮಹೇಶ್ ಸಂಸ್ಥಾಪಕ ಅಧ್ಯಕ್ಷರು ರಾಧಾಕೃಷ್ಣನ್ ಅವರ ಸಮಗ್ರ ಪರಿಚಯವನ್ನು ಒಂದೇ ಕಡೆ ಪಡೆಯಬಹುದಾದ ದಾಖಲೆಯ ಸ್ಪರ್ಧಾ ಕಾರ್ಯಕ್ರಮ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ತಾಂತ್ರಿಕ ವಿಭಾಗದ ಮುಖ್ಯಸ್ಥ ಚಂದ್ರಶೇಖರ ನಾಯಕ ಈ ವಿನೂತನ ಸ್ಪರ್ಧೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂತೋಷಕುಮಾರ ಬಂಡೆ ಶುಭ ಹಾರೈಸಿದರು. ರಾಜ್ಯ ಸಹಕಾರ ಸಮಿತಿಯ ಮುಖ್ಯಸ್ಥೆ ಉಮಾ ಗುಡ್ಡದ ತಾಂತ್ರಿಕ ನಿರ್ವಹಣೆ ಮಾಡಿದರು. ತಾಂತ್ರಿಕ ವಿಭಾಗದ ಸಂಪನ್ಮೂಲ ವ್ಯಕ್ತಿಗಳಾದ ಸದಾಶಿವ ಬಾಗಿ ತಾಂತ್ರಿಕ ನೆರವು ನೀಡಿದರು.

300x250 AD

ಈ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಮತ್ತು ಆರೋಗ್ಯ ಶಿಕ್ಷಣ ಸೇವೆ ವೇದಿಕೆಯ ಪದಾಧಿಕಾರಿಗಳಾದಹಾಲ್ಯಾ ನಾಯ್ಕ್,ನಾಗಪ್ಪ ಹೆಗ್ಗೇರಿ, ಚಂದ್ರಕಾಂತ ತಳವಾಡೆ, ಸುರೇಶ ಛಿ, ಹನುಮಂತ ಶಿರಾಸ್ಯಾಡ, ರುದ್ರಸ್ವಾಮಿ ಗುರುವಿನ ಮಠ, ಶ್ರೀಶ ಕುಲಕರ್ಣಿ, ದತ್ತಾತ್ರೇಯ ಹೆಗಡೆ, ಬಸವರಾಜ್ ತುರಮುರಿ, ಅಮರೇರ್ ಅಂಗಡಿ, ಲಕ್ಷ್ಮಣ ಗುಮ್ಮಾಲ್, ಬಸವರಾಜ ಹನಮಂತಗೌಡರ, ಶೋಭಾರಾಣಿ ಎಂಪಿ, ಪ್ರೇಮಾ ದೇವಲೆ, ವಾಣಿಶ್ರೀ, ಸುನಂದಾ ಪುರಾಣಿಕ್, ಮಂಜುಳಾ ಮೋರೆ, ಮಂಜುಳಾ ನಾಮದೇವ, ರಾಜೇಶ್ವರಿ, ರಾಜೇಶ್ವರಿ ಹೂಗಾರ್, ಶಾಂತಕುಮಾರ, ಪ್ರಸನ್ನಕುಮಾರ ಶೇನೋಯ್, ವಜ್ರಮುನೇಶ್, ಉಮಾಕಾಂತ ಭಾಗವಹಿಸಿದ್ದರು.

2000ಕ್ಕಿಂತ ಹೆಚ್ಚು ಶಿಕ್ಷಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಂಜುಳಾ ಮೋರೆ ಕಾರ್ಯಕ್ರಮ ನಿರೂಪಣೆ, ಸುನಂದಾ ಪುರಾಣಿಕ್ ಉಪನ್ಯಾಸಕರ ಪರಿಚಯ ಮಾಡಿದರು ಮಾಡಿದರು. ರಾಜೇಶ್ವರಿ ಪ್ರಾರ್ಥಿಸಿದರು. ವಾಣಿಶ್ರೀ ಸ್ವಾಗತಿಸಿದರು. ಹಾಲ್ಯಾ ನಾಯ್ಕ ಸಂವಾದ ನಡೆಸಿಕೊಟ್ಟರು. ನಾರಾಯಣ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top