Slide
Slide
Slide
previous arrow
next arrow

ತರಬೇತಿ ಪಡೆದು ಸ್ವಾವಲಂಬಿಗಳಾಗಿ: ಲತಾ ನಾಯಕ

300x250 AD

ಕಾರವಾರ: ಸಾಕ್ಷರಾರ್ಥಿಗಳಿಗೆ ಹಾಗೂ ವಿದ್ಯಾವಂತರಿಗೂ ಜನ ಶಿಕ್ಷಣ ಸಂಸ್ಥಾನ ತರಬೇತಿ ನಿಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲತಾ ನಾಯಕ ಕರೆ ನೀಡಿದರು.

ಅವರು ಜನಶಿಕ್ಷಣ ಸಂಸ್ಥಾನ ಆಶ್ರಯದಲ್ಲಿ ಕಾರವಾರದ ಎನ್‌ಜಿಓ ಸಭಾಂಗಣದಲ್ಲಿ ನಡೆದ ‘ಕೌಶಲ ದಿಕ್ಷಾಂತ ಸಮಾರಂಭ’ ಉದ್ಘಾಟಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಜನ ಶಿಕ್ಷಣ ಸಂಸ್ಥಾನದಲ್ಲಿ ತರಬೇತಿ ಪಡೆದವರು ಇತರರಿಗೂ ತರಬೇತಿ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದರು.

ಬಾಪೂಜಿ ಗ್ರಾಮಿಣ ವಿಕಾಸ ಸಮಿತಿಯ ಉಪಾಧ್ಯಕ್ಷ ಉಲ್ಲಾಸ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ಶಿಕ್ಷಣ ಸಂಸ್ಥಾನದ ಮೂಲಕ ವಿವಿಧ ಬಗೆಯ ಕೌಶಲ ತರಬೇತಿ ಪಡೆದ ಶಿಬಿರಾರ್ಥಿಗಳು ತಾವು ಆರ್ಥಿಕವಾಗಿ ಸಬಲರಾಗುವದೊಂದಿಗೆ ದೇಶದ ಪ್ರಗತಿಗೆ ಕೋಡುಗೆ ನೀಡಬೇಕೆಂದರು.

300x250 AD

ಲೀಡ್ ಬ್ಯಾಂಕ್ ಮ್ಯಾನೇಜರ್ ರೇವತಿ ಸುಧಾಕರ ಮಾತನಾಡಿ, ನೌಕರಸ್ಥರಾಗುವ ಬದಲು ಸ್ವದ್ಯೋಗ ಕೈಗೊಳ್ಳುವವನೆ ಶ್ರೇಷ್ಠ ಎಂದರು. ಸಿಡಾಕ್ ಉಪನಿರ್ದೇಶಕ ಶಿವಾನಂದ ಯಲಿಗಾರ, ಜೀವನ ಗುಣಮಟ್ಟ ಸುಧಾರಣೆಯಾಗಲು ಕೌಶಲ ತರಬೇತಿ ಪಡೆಯುವುದು ಇಂದು ತೀರ ಅವಶ್ಯಕವಾಗಿದೆ ಎಂದರು.

2022-23ರಲ್ಲಿ ಜಿಲ್ಲೆಯ ವಿವಿಧ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆ ಮೇಲೆ ಶುಭಾಂಗಿನಿ ಶಿರೋಡ್ಕರ, ಉಪಸ್ಥಿತರಿದ್ದರು. ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ಶಶಿಕಾಂತ ನಾಯ್ಕ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಪ್ರಕಾಶ ತಳೇಕರ ಕಾರ್ಯಕ್ರಮ ನಿರೂಪಿಸಿದರು. ರೀತು ಹಾಗೂ ಸಂಗಡಿಗರ ಸ್ವಾಗತ ಗಿತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ವಿವಿಧ ತರಬೇತಿ ಪಡೆದ ನೂರಾರು ಜೆಎಸ್‌ಎಸ್ ಶಿಬಿರಾರ್ಥಿಗಳು ಪ್ರಮಾಣಪತ್ರ ಪಡೆದರು.

Share This
300x250 AD
300x250 AD
300x250 AD
Back to top