ಮುಂಡಗೋಡ: ಮಳೆ ಕೊರತೆಯಿಂದ ರೈತರು ಬೆಳೆದ ಬೆಳೆಗಳು ಇಳುವರಿ ಬಾರದೆ ಸಂಪೂರ್ಣ ಬೆಳೆ ನಾಶವಾಗಿದ್ದರಿಂದ ರೈತರು ಮಾಡಿದ ಸಾಲ ಮನ್ನಾ ಮಾಡಿ ಬೆಳೆ ವಿಮೆ ನೀಡಲು ಇಲ್ಲಿಯ ತಹಶೀಲ್ದಾರ ಶಂಕರ ಗೌಡಿ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ರೈತರು ಮನವಿ ರವಾನೆ ಮಾಡಿದ್ದಾರೆ.
ತಾಲೂಕಿನ ಕಾತೂರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸಭೆ ಮಾಡಿ ಸಭೆಯಲ್ಲಿ ಠರಾವು ಮಾಡಿ ಸಾಲ ಮನ್ನಾ ಮಾಡಿ ಹಾಗೂ ಬೆಳೆ ವಿಮೆ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ನೀಡಿದ್ದಾರೆ. ಕಬ್ಬು ಮೆಕ್ಕೆಜೋಳ, ಭತ್ತ, ಅಡಿಕೆ ಇವುಗಳು ಮಳೆ ಕೊರತೆಯಿಂದ ಬೆಳೆ ಬಾರದೆ ಸಂಪೂರ್ಣ ನಾಶವಾಗಿದ್ದು ರೈತರು ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆ ಬೆಳೆಯಲು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ರೈತರು ಬೆಳೆ ಬೆಳೆಸಲು ಸಾಲ ಮಾಡಿದ್ದು ಬೆಳೆ ಸರಿಯಾಗಿ ಬಾರದೆ ಸಾಲ ತಿರೀಸಲು ಕಷ್ಟಕರವಾಗಿದೆ. ರಾಜ್ಯ ಸರಕಾರ ಮುಂಡಗೋಡ ತಾಲೂಕು ಅತಿ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಸಾಲ ಮನ್ನಾ ಮಾಡಿಯೇ ಬೆಳೆ ವಿಮೆ ದೋರಕಿಸಿ ಕೊಡಲು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ಶಿವಾಜಿ ಶಿಂಧೆ, ಉಪಾಧ್ಯಕ್ಷ ಮಧುಕರ ತಳವಾರ, ಸದಸ್ಯರಾದ ಮಂಜುನಾಥ ಕುಲ್ಸಾಪುರ, ನಿತಿನ ರಾಯ್ಕರ, ಫಕ್ಕೀರಪ್ಪ ಯಲ್ಲಾಪುರ, ಈರಯ್ಯ ಹಿರೇಮಠ, ಬಸವರಾಜ ಕುಂಬಾರ ಹಾಗೂ ಹನ್ಮವ್ವ ವಡ್ಡರ, ಜಗಧೀಶ ಪಾಟೀಲ್ ಹಾಗೂ ಹಾಲಪ್ಪ ರಾಣೆಬೆನ್ನೂರ ಮುಂತಾದವರಿದ್ದರು.