Slide
Slide
Slide
previous arrow
next arrow

ಅರಣ್ಯ ವಿಭಾಗಗಳ ರ‍್ಕಿಂಗ್ ಪ್ಲಾನ್‌ಗಳಲ್ಲಿ ಮಾರ್ಪಾಡಿಗೆ ಆಗ್ರಹ

300x250 AD

ಶಿರಸಿ: ಪಶ್ಚಿಮ ಘಟ್ಟದ ಜಿಲ್ಲೆಗಳ ಶಿವಮೊಗ್ಗ, ಸಾಗರ, ಶಿರಸಿ, ಯಲ್ಲಾಪುರ, ಕೊಪ್ಪ, ಮಡಿಕೇರಿ, ಕುಂದಾಪುರ ಮುಂತಾದ ಅರಣ್ಯ ವಿಭಾಗಗಳ ರ‍್ಕಿಂಗ್ ಪ್ಲಾನ್‌ಗಳಲ್ಲಿ ಕೆಲವೊಂದು ಮಾರ್ಪಾಡು ಮಾಡುವಂತೆ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಪರಿಸರ ತಜ್ಞರ ನಿಯೋಗವು ಅರಣ್ಯ- ಪರಿಸರ ಸಚಿವ ಈಶ್ವರ ಖಂಡ್ರೆಗೆ ಮನವಿ ರವಾನಿಸಿದೆ.

ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ರ‍್ಕಿಂಗ್ ಪ್ಲಾನ್ ಕೋಡ್– 2023ರ ಮಾರ್ಗಸೂಚಿ ವರದಿ ಪ್ರಕಟವಾಗಿದೆ. ಈ ವರದಿಯಂತೆ ರಾಜ್ಯ ರ‍್ಕಿಂಗ್ ಪ್ಲಾನ್‌ನಲ್ಲಿ ಹಲವು ಮಾರ್ಪಾಡುಗಳನ್ನು ಮಾಡಬೇಕು. 2023-2033 ರ 10 ವರ್ಷಗಳ ಅರಣ್ಯ ಕ್ರಿಯಾ ಯೋಜನೆ ರೂಪಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಯಾರಿ ನಡೆಯುತ್ತಿದೆ. ಆಯಾ ಅರಣ್ಯ ವಿಭಾಗ ಮಟ್ಟದಲ್ಲಿ ಅರಣ್ಯ ನಿರ್ವಹಣೆಗೆ 10 ವರ್ಷದ ಕ್ರಿಯಾ ಯೋಜನೆ ರೂಪಿಸುವ ಪದ್ಧತಿ ಅರಣ್ಯ ಇಲಾಖೆಯ ಅನನ್ಯ ಪರಂಪರೆ, ವಿಕೇಂದ್ರಕೃತವಾಗಿ ಸಿದ್ಧವಾಗುವ ರ‍್ಕಿಂಗ್ ಪ್ಲಾನ್ ತಾತ್ವಿಕವಾಗಿ ಜಗತ್ತಿಗೇ ಮಾದರಿ ಆಗಿದೆ. ಆದರೆ ಅರಣ್ಯ ರ‍್ಕಿಂಗ್ ಪ್ಲಾನ್ ಅದೇ ಹಳೆಯ ವಿಧಾನ, ಸ್ವರೂಪ, ಮಾದರಿಗಳಲ್ಲಿ ಬದಲಾವಣೆಬೇಕು. 75 ವರ್ಷಗಳ ಹಿಂದಿನ ಅರಣ್ಯ ಮತ್ತು ನಿಸರ್ಗ ಸಮೃದ್ಧಿ ಈಗಿಲ್ಲ. ಹವಾಮಾನ ಬದಲಾವಣೆ, ಬರಗಾಲ, ಅರಣ್ಯನಾಶ, ಉಷ್ಣತಾ ತಾಪಮಾನ, ಭೂಕುಸಿತ ಮುತಾದ ಪ್ರಚಲಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ರ‍್ಕಿಂಗ್ ಪ್ಲಾನ್ ತಯಾರಿ ಮಾನದಂಡಗಳು ಬದಲಾಗಬೇಕು ಎಂದು ಆಗ್ರಹಿಸಿದೆ.

ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ 40 ವರ್ಷಗಳ ಕಾಲ ಅರಣ್ಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ರಚನಾತ್ಮಕ ಜನಾಂದೋಲನಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಅಭಿಪ್ರಾಯಗಳನ್ನು ವಿವಿಧ ವೇದಿಕೆಗಳಲ್ಲಿ ಮಂಡಿಸುತ್ತಲೇ ಇದ್ದೇವೆ. ಪಶ್ಚಿಮ ಘಟ್ಟ ಕರ‍್ಯಪಡೆ, ಜೀವವೈವಿಧ್ಯ ಮಂಡಳಿ, ರಾಜ್ಯ ಸರ್ಕಾರದ ಭೂಕುಸಿತ ಅಧ್ಯಯನ ಸಮಿತಿ ಇವುಗಳ ಪರವಾಗಿ ಈ ಬಗ್ಗೆ ಗಮನ ಸೆಳೆದಿದ್ದೇವೆ. ವಿವಿಧ ತಜ್ಞರು, ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳ ವರದಿಗಳೂ ಅರಣ್ಯ ರ‍್ಕಿಂಗ್ ಪ್ಲಾನ್‌ಗೆ ಹಲವು ಸುಧಾರಣೆಗಳನ್ನು ಸೂಚಿಸಿವೆ ಎಂಬುದು ಅಷ್ಟೇ ಮುಖ್ಯ. ಇತ್ತೀಚೆಗೆ ಶಿರಸಿಯಲ್ಲಿ ಅರಣ್ಯ ಕಾಲೇಜಿನಲ್ಲಿ ಜಾಗತಿಕ ಪರಿಸರ ದಿನದಂದು ಕೆನರಾ ವೃತ್ತ ರ‍್ಕಿಂಗ್ ಪ್ಲಾನ್ ಬಗ್ಗೆ ಚರ್ಚೆ ನಡೆಸಿದ್ದೇವೆ. ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೇಂದ್ರ– ರಾಜ್ಯ ಉನ್ನತ ಅರಣ್ಯ ಅಧಿಕಾರಿಗಳ ಜೊತೆ ಈ ವಿಷಯ ಚರ್ಚಿಸಿದ್ದೇವೆ. ಅರಣ್ಯ, ಜೀವವೈವಿಧ್ಯ ಕಾಯಿದೆ, ಪರಿಸರ ಕಾಯಿದೆ, ಸುಪ್ರೀಂ ಕೋರ್ಟ ಗೋದಾವರಂ ಪ್ರಕರಣ, ಸಿಇಸಿ, ಹೀಗೆ ಹಲವು ಕಾನೂನುಗಳ ಸೇರ್ಪಡೆ, ಆದೇಶಗಳ ಹಿನ್ನೆಲೆಯಲ್ಲಿಯೂ ರ‍್ಕಿಂಗ್ ಪ್ಲಾನ್‌ನ ಮಾನದಂಡಗಳು ಬದಲಾಗಬೇಕು. ಸಮಗ್ರ ದೃಷ್ಟಿಕೋನ ಹೊಂದಬೇಕು ಎಂಬುದು ನಮ್ಮ ಮುಖ್ಯ ಒತ್ತಾಸೆಯಾಗಿದೆ ಎಂದು ತಿಳಿಸಿದೆ.

ಅರಣ್ಯ ಸಂರಕ್ಷಣೆ ಮತ್ತು ನೆಡುತೋಪು ಬೆಳೆಸುವ 2 ವಿಷಯಗಳಲ್ಲಿ ಅರಣ್ಯ ಸಂರಕ್ಷಣೆಗೆ ಇಂದು ಅತಿ ಹೆಚ್ಚು ಆದ್ಯತೆ ಸಿಗಬೇಕಿದೆ. ರ‍್ಕಿಂಗ್ ಪ್ಲಾನ ಚಲನಶೀಲವಾಗಬೇಕು. ಕ್ರಿಯಾಶೀಲವಾಗಿರಬೇಕು. ರ‍್ಕಿಂಗ್ ಪ್ಲಾನ್ ರಾಜ್ಯ ಭಾಷೆಯಲ್ಲಿ ಇರಬೇಕು ಎಂಬ ಅಂಶವನ್ನು ಹತ್ತು ವರ್ಷಗಳಿಂದ ಹೇಳುತ್ತಿದ್ದೇವೆ. ಸ್ಥಳೀಯ ಜನರು, ರೈತರು, ಗ್ರಾಮ ಅರಣ್ಯ ಸಮಿತಿ, ಪಂಚಾಯತ,  ಜೀವವೈವಿಧ್ಯ ಸಮಿತಿ, ವನವಾಸಿಗಳಿಗೆ ಓದಲು, ಅರ್ಥೈಸಲು ಸಾಧ್ಯವಾಗಬೇಕು. ಗುಜರಾತನಲ್ಲಿ ಸ್ಥಳೀಯ ಭಾಷೆಯಲ್ಲಿ ರ‍್ಕಿಂಗ್ ಪ್ಲಾನ ತಯಾರಿಸಲಾಗುತ್ತಿದೆ.

300x250 AD

 ಭೂಕುಸಿತ ಕಳೆದ 7-8 ವರ್ಷಗಳಿಂದ ಸಾಮಾನ್ಯವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟದ 23 ತಾಲೂಕುಗಳನ್ನು ಸಂಭಾವ್ಯ ಭೂಕುಸಿತ ತಾಲೂಕುಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಘಟ್ಟ, ಗುಡ್ಡಗಳಲ್ಲಿ ನೆಡುತೋಪು ಬೆಳೆಸುವ, ಕಟಾವು ಮಾಡುವ ಪದ್ಧತಿ ಕೈಬಿಡಬೇಕು. ನೆರಿಯ, ಸುಬ್ರಮಣ್ಯ, ಗೇರುಸೊಪ್ಪ, ಜೋಯಿಡಾ, ತಲಕಾವೇರಿ, ಆಗುಂಬೆ ಗಳಲ್ಲಿ ನೂರಾರು ಎಕರೆ ನೆಡುತೋಪು ಕಟಾವು ಮಾಡಿದರೆ ಭೂಕುಸಿತಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಪಶ್ಚಿಮ ಘಟ್ಟದಲ್ಲಿ ಗುಡ್ಡಗಳಲ್ಲಿ ಗೇರು ನೆಡುತೋಪು, ರಬ್ಬರ ನೆಡುತೋಪು ಬೆಳೆಸುವ ಪದ್ಧತಿ ಕೈಬಿಡಬೇಕು ಎಂದು ಆಗ್ರಹಿಸಿದೆ.

 ನಿಯೋಗದಲ್ಲಿ ಅನಂತ ಹೆಗಡೆ ಅಶೀಸರ, ವಿ.ಎನ್.ಹೆಗಡೆ ಬೊಮ್ಮನಳ್ಳಿ, ಡಾ.ಕೇಶವ ಕೊರ್ಸೆ, ಜಿ.ಎನ್.ಹೆಗಡೆ ಮುರೇಗಾರ, ನರೇಂದ್ರ ಹೊಂಡಗಾಶಿ, ರಮಾಕಾಂತ ಮಂಡೇಮನೆ, ರತ್ನಾಕರ ಬಾಡಲಕೊಪ್ಪ, ಡಾ.ಬಾಲಚಂದ್ರ ಸಾಯಿಮನೆ, ಜಿ.ಆರ್.ಹೆಗಡೆ ಬೆಳ್ಳೆಕೇರಿ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top