ಹೊನ್ನಾವರ: ವುಶು ಚಾಂಪಿಯನ್ಶಿಪ್ನಲ್ಲಿ ಅನ್ವಿತಾ ನಾಯ್ಕ ದಸರಾ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಪ್ರೇಮಾ ಮತ್ತು ನಾಗೇಂದ್ರ ನಾಯ್ಕ ಪುತ್ರಿ ಅನ್ವಿತಾ ಇವರು ಬಾಗಲಕೋಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗದ ದಸರಾ ಕ್ರೀಡಾಕೂಟದ ವಶು ಲೀಗ್ ಸಬ್ ಜೂನಿಯರ್ ಶಾನ್ಸು(ಪೈಟ್) ಕ್ರೀಡೆಯ 42 ಕೆ.ಜಿ. ಒಳಗಿನ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಅ.11ರಿಂದ 15ರವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರತಿನಿಧಿಸಲಿದ್ದಾರೆ.
ವಶು ಅಶೋಸಿಯೇಶನ್ ಜನರಲ್ ಸೆಕ್ರಟರಿ ರಾಘವೆಂದ್ರ ಹೊನ್ನಾವರ ಇವರ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಪಟ್ಟಣದ ಮಾರ್ಥೋಮಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಇವಳ ಸಾಧನೆಗೆ ಸಚೀವ ಮಂಕಾಳ ವೈದ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ತರಬೇತಿದಾರ ರಾಘವೇಂದ್ರ ಹೊನ್ನಾವರ, ಮಾರ್ಥೊಮಾ ಸಂಸ್ಥೆಯವರು ಅಭಿನಂದಿಸಿ ಶುಭಹಾರೈಸಿದ್ದಾರೆ.