Slide
Slide
Slide
previous arrow
next arrow

ಚಿಂತನಾ ಲಹರಿ ಕೃತಿ ಲೋಕಾರ್ಪಣೆ

300x250 AD

ಶಿರಸಿ: ಜೀವನದಲ್ಲಿ ವಿವೇಕ ಅಗತ್ಯ. ಸಂಘರ್ಷವಾದಾಗ ವಿವೇಕವು ಮುಂದಾಗುವ ಅನಾಹುತವನ್ನು ತಪ್ಪಿಸಲು ನೇರವಾಗಿ ನೆರವಾಗುತ್ತದೆ. ಸದಾ ದ್ವಂದ್ವ ನಿಲುವನ್ನು ಒಪ್ಪಿಕೊಂಡು ಅಪ್ಪಿಕೊಳ್ಳಬಾರದು. ಜೀವನದ ಪರಮ ಉದ್ಧೇಶ ಇಂದ್ರಿಯಗಳ ತೃಪ್ತಿಗಾಗಿ ಅಲ್ಲವೇ ಅಲ್ಲ. ಅದು ನಮ್ಮನ್ನು ಪರಮಾತ್ಮನ ಕಡೆಗೆ ಕೊಂಡೊಯ್ಯುವ0ತಿರಬೇಕು ಎಂದು ನಿವೃತ್ತ ಮುಖ್ಯಾಧ್ಯಾಪಕ, ಸಾಹಿತಿ, ಚಿಂತಕ, ಸಮಾಜ ಸೇವಕ ಕೆ.ಆರ್.ಹೆಗಡೆ ದೇವಿಸರ(ಕಾನಸೂರು) ಹೇಳಿದರು.

ಅವರು ಸಾಹಿತ್ಯ ಸಂಚಲನ ಶಿರಸಿ ಆಶ್ರಯದಲ್ಲಿ ನಡೆದ ಮಂಜುನಾಥ ಎಸ್.ಹೆಗಡೆಯವರ ‘ಚಿಂತನಾ ಲಹರಿ’ ಕೃತಿ ಲೋಕಾರ್ಪಣೆ ಹಾಗೂ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ನಾವು ಮಾಡುವ ಕೆಲಸದಲ್ಲಿ ನಮಗೆ ಪ್ರೀತಿ ಹಾಗೂ ತೃಪ್ತಿಯಿರಬೇಕು. ಇದರಿಂದ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ನಮ್ಮನ್ನು ನಾವು ಗುರುತಿಸಿಕೊಳ್ಳಲು ಸಹಾಯಕವಾಗುತ್ತದೆ. ದಿನ ನಿತ್ಯದ, ವ್ಯಾವಹಾರಿಕ, ಆಧ್ಯಾತ್ಮಿಕ ಜೀವನದಲ್ಲಿ ಶಾಂತಿ, ನೆಮ್ಮದಿ, ಜೀವನೋತ್ಸಾಹ ಪಡೆಯಬೇಕಾದರೆ ಎಲ್ಲವನ್ನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಿ ಮುಂದುವರೆದಲ್ಲಿ ಸತ್ಯದ ಸಾಕ್ಷಾತ್ಕಾರವಾಗುತ್ತದೆ ಎಂದು ಅನುಭವ ಪೂರ್ಣ ಉದಾಹರಣೆಗಳೊಂದಿಗೆ ಮನೋಜ್ಞವಾಗಿ ಮಾತನಾಡಿದರು.

ಚಿಂತನಾ ಲಹರಿ ಕೃತಿ ಲೋಕಾರ್ಪಣೆಯನ್ನು ಮಾಡಿದ ಚಿಂತಕ, ಅರ್ಥದಾರಿ ಗಣಪತಿ ಭಟ್ಟ, ವರ್ಗಾಸರ ‘ಷಡೇತೆ ಮಮ ಬಾಂಧವಾಃ’ ಎಂದು ಮನ ಮುಟ್ಟುವಂತೆ ಮಾತನಾಡಿದರು. ಕೃತಿ ಪರಿಚಯವನ್ನು ಕಥೆಗಾರ ಡಿ.ಎಸ್.ನಾಯ್ಕರು ಅತ್ಯಂತ ಸುಂದರವಾಗಿ ಮಾಡಿಕೊಟ್ಟರು. ಸಾಹಿತ್ಯ ಸಂಚಲನದ ಸಂಚಾಲಕ ಕೃಷ್ಣ ಪದಕಿಯವರು ‘ಚಿಂತೆ ನಕಾರಾತ್ಮಕ, ಚಿಂತನೆ ಸಕಾರಾತ್ಮಕ, ಕರ್ಮವೆಂದರೆ ಕ್ರಿಯೆ ಮತ್ತು ಪ್ರತಿಕ್ರಿಯೆ ಕರ್ಮಫಲದಿಂದ ಯಾರೂ ತಪ್ಪಿಸಿಕೊಳ್ಳಲಾರರು’ ಎಂದು ಅರ್ಥಗರ್ಭಿತವಾಗಿ ವಿವರಿಸಿದರು.

300x250 AD

ಕೃತಿಕಾರ ಎಂ.ಎಸ್.ಹೆಗಡೆಯವರು ಕಾರವಾರದ ರಾಮಕೃಷ್ಣ ಆಶ್ರಮದ ಸ್ವಾಮಿ ಭವೇಶಾನಂದರಿAದ ದೀಕ್ಷೆ ಪಡೆದೆ. ಎಲ್ಲವೂ ಭಗವಂತಯನ ಲೀಲೆಯೆಂದು ಅರಿತು. ಆಧ್ಯಾತ್ಮದ ಕಡೆಗೆ ವಾಲಿದೆ. ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತ ಓದುತ್ತ ಟಿಪ್ಪಣಿಗಳನ್ನು ಬರೆದಿಡಲಾರಂಭಿಸಿದೆ. ಅವೆಲ್ಲದರ ಫಲಶೃತಿಯೇ ಈ ಚಿಂತನಾ ಲಹರಿ” ಎಂದು ಹೃದಯಂಗಮವಾಗಿ ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸುಶೀಲಾ ಹೆಗಡೆ, ಲಾವಣ್ಯ ಹೆಗಡೆ ಸುಶ್ರಾವ್ಯವಾಗಿ ಪ್ರಾರ್ಥನೆ ಮಾಡಿದರು. ಜಗದೀಶ ಭಂಡಾರಿಯವರು ಗಾಂಧಿ ಹಾಗೂ ಶಾಸ್ತ್ರಿಜಿಯವರ ಸ್ಮರಣೆಯನ್ನು ಹಾಡಿನ ಮೂಲಕ ಮಾಡಿದರು. ಕವಯತ್ರಿ ಶೋಭಾ ಭಟ್ ಎಲ್ಲರನ್ನು ಸ್ವಾಗತಿಸಿ ಪರಿಚಯಿಸಿದರು. ಗಾಯನ ಕಾರ್ಯಕ್ರಮದಲ್ಲಿ ಲಾವಣ್ಯ, ರಾಧಾ ಹೆಗಡೆ, ವಿಮಲಾ ಭಾಗ್ವತ, ವನಿತಾ ಭಟ್, ಗಂಗಾ ಹೆಗಡೆ, ಕೆ.ಎಸ್ ಅಗ್ನಿಹೋತ್ರಿ, ದಿನೇಶ ಭಾಗ್ವತ ತಮ್ಮ ಸುಮಧುರ ಕಂಠಸಿರಿಯಿAದ ಸಂಗೀತ ಪ್ರೇಮಿಗಳ ಮನಸ್ಸನ್ನು ರಂಜಿಸಿದರು. ಕೃತಿಕಾರ ಎಂ.ಎಸ್.ಹೆಗಡೆ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಚಿಂತಕ ಜಿ ಟಿ ಹೆಗಡೆ ಉಂಚೋಡಿ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರೊ ಡಿ.ಎಮ್ ಭಟ್ ಕುಳವೆ ಸರ್ವರನ್ನು ವಂದಿಸಿದರು. ಕಥೆಗಾರ್ತಿ ಪ್ರತಿಭಾ ಎಂ. ನಾಯ್ಕ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಶೇಷ ಆಮಂತ್ರಿತರಾಗಿ ವಾಸುದೇವ ಶಾನಭಾಗ, ಜಯಪ್ರಕಾಶ ಹಬ್ಬು, ಮನೋಹರ ಮಲ್ಮನೆ, ರಾಮ ಭಟ್, ರಾಜು ಉಗ್ರಾಣಕರ, ಸಿ.ಎಸ್.ಹೆಗಡೆ, ದಾಕ್ಷಾಯಿಣಿ ಪಿ.ಸಿ., ವಿ.ಪಿ.ಹೆಗಡೆ ವೈಶಾಲಿ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top