ಹಳಿಯಾಳ: ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವಂತೆ ಕೆಲ ಯುವಕರು ಹಿಂದೂ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ವತಿಯಿಂದ ತಾಲೂಕು ಅಧ್ಯಕ್ಷ ಶ್ರೀಪತಿ ಭಟ್ ಅವರ ಮುಂದಾಳತ್ವದಲ್ಲಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಸೆಪ್ಟೆಂಬರ್ 19ರಂದು ದಾಂಡೇಲಿಯ ಮುಸ್ಲಿಂ ಸಮುದಾಯದ ಕೆಲವು ಯುವಕರ ಗುಂಪೊAದು ಸೂಪಾದ ಬಾಪೇಲಿ ಮುಳುಗಡೆ ಪ್ರದೇಶದಲ್ಲಿರುವ ಪುರಾತನ ಹಿಂದೂ ದೇವಾಲಯದ ವಿಗ್ರಹಗಳನ್ನು ಧ್ವಂಸ ಮಾಡುತ್ತಿರುವ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮುಸ್ಲಿಂ ಸಮುದಾಯದ ಯುವಕರು ವಿಧಿ ವಿರುದ್ಧವಾದ ಅಕ್ರಮ ಕೂಟವನ್ನು ರಚಿಸಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಉದ್ದೇಶದಿಂದ ಹಿಂದೂ ಜನರ ಧಾರ್ಮಿಕ ಭಾವನೆಗೆ ದಕ್ಕೆ ತರುವಂತೆ ಹಿಂದೂ ಧರ್ಮ ಅವಮಾನಗೊಳಿಸುವ ಉದ್ದೇಶದಿಂದ ಈ ಕೃತ್ಯ ಕೈಗೊಂಡಿರುತ್ತಾರೆ. ಆದ ಕಾರಣ ತಾವುಗಳು ಕೂಡಲೇ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಶಿಕ್ಷೆಗೆ ಒಳಗಾಗಿಸಲು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಮುತ್ನಾಳೆ, ಪುರಸಭೆ ಸದಸ್ಯರಾದ ಚಂದ್ರಕಾAತ ಕಮ್ಮಾರ, ಸಂತೋಷ ಘಟಕಾಂಬಳೆ, ಪ್ರಮುಖರಾದ ಆನಂದ ಕಂಚನಾಳಕರ, ಶ್ರೀನಿವಾಸ ದೊಡ್ಡಮನಿ, ಮೋಹನ ಮೌಳಂಗಿ, ನಾರಾಯಣ ಅಂತ್ರೋಳಕರ, ಆಕಾಶ ಉಪ್ಪಿನ, ಮಂಜುನಾಥ ಗೌಳಿ, ಮೊದಲಾದವರು ಉಪಸ್ಥಿತರಿದ್ದರು.