ಕಾರವಾರ: ಸಂಸತ್ತಿನಿ0ದ ಅಂಗೀಕಾರವಾದ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹವಾದರೂ, ಇದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿದ್ದಾರೆ.
೨೦೧೦ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಂಸತ್ತಿನ ರಾಜ್ಯ ಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿ ಅಂಗೀಕಾರಗೊAಡಿತ್ತು. ಆದರೆ ಕಾರಣಾಂತರದಿ0ದ ಈ ಮಸೂದೆ ಲೋಕಸಭೆಗೆ ಬಾರದೆ ಇದ್ದ ಪ್ರಯುಕ್ತ ಬಿಜೆಪಿ ಸರಕಾರ ಪ್ರಸ್ತುತ ಸದರಿ ಮಸೂದೆಗೆ ಕೆಲವು ತಿದ್ದುಪಡಿ ತಂದು ಸಂಸತ್ತಿನಲ್ಲಿ ಮಂಡಿಸಿ ಇದೀಗ ಅಂಗೀಕಾರಗೊ0ಡಿದೆ. ಆದರೆ ಈ ಮಸೂದೆಯ ಅನುಷ್ಠಾನದ ಕಾಲಮಿತಿಯ ಕುರಿತು ಯಾವುದೇ ಸ್ಪಷ ಇಲ್ಲದ ಕಾರಣ ಇದೊಂದು ಊಟಕ್ಕಿಲ್ಲದ ಉಪ್ಪನಕಾಯಿಗೆ ಸರಿಸಮಾನವಾಗಿದೆ. ಕೇಂದ್ರ ಗೃಹ ಸಚಿವರು ಲೋಕಸಭೆಯಲ್ಲಿ ಮಾತನಾಡುತ್ತಾ ದೇಶದಲ್ಲಿ ಸಾರ್ವತ್ರಿಕ ಜನಗಣತಿ ನಡೆದು ಆ ನಂತರ ಕ್ಷೇತ್ರ ಪುನರ್ವಿಂಗಡಣೆ ಕಮಿಷನ್ ಮುಖಾತಂತರ ಲೋಕಸಭೆ ಮತ್ತು ವಿಧಾನಸಭೆ ಗಳಲ್ಲಿ ಮಹಿಳಾ ಕ್ಷೇತ್ರಗಳನ್ನು ಗುರುತು ಹಚ್ಚಲಾಗುವುದು ಎಂದಿದ್ದಾರೆ. ಆದರೆ ಇದಕ್ಕೆ ಕಾಲಮಿತಿ ಗೊತ್ತು ಪಡಿಸಿಲ್ಲ ಎಂದಿದ್ದಾರೆ.
ನಮ್ಮ ದೇಶದಲ್ಲಿ ನಡೆಯಬೇಕಾಗಿದ್ದ ೨೦೨೧ರ ಜನಗಣತಿ ಕೋರೋಣ ದಿಂದಾಗಿ ಹಳ್ಳ ಹಿಡಿದಿದೆ. ಇದು ಶಾಸ್ತ್ರೀಯವಾಗಿ ಮುಕ್ತಾಯ ವಾಗ ಬೇಕಾದರೆ ಹಲವಾರು ವಷಗಳೇ ಬೇಕು. ತದನಂತರ ಮಹಿಳಾ ಕ್ಷೇತ್ರಗಳನ್ನು ಗುರುತಿಸಿ ಕಾನೂನಾಗಿ ಪರಿವರ್ತಿಸಲು,ದೇಶದ ಶೇಕಡಾ ಐವತ್ತರಸ್ಟು ರಾಜ್ಯಗಳ ವಿಧಾನ ಮಂಡಳ ಗಳಲ್ಲಿ ಈ ಕಾನೂನನ್ನು ಅಂಗೀಕರಿಸಬೇಕಾಗಿದೆ. ಈ ಮಧ್ಯೆ ರಾಜಕೀಯ ಅಸ್ತಿರತೆ ,ಕೋರ್ಟು ಕಚೇರಿ ಎಂಬ ಪ್ರಹಸನ ನಡೆದರೆ ಅದು ಮತ್ತಸ್ಟು ಕಾಲಹರಣಕ್ಕೆ ಕಾರಣವಾದೀತು. ಕೇಂದ್ರ ಸರಕಾರ ಮನಸ್ಸು ಮಾಡಿದ್ದರೆ ೨೦೧೧ರ ಜನಗಣತಿಯ ಅಂಕಿ ಅಂಶ,ಮತ್ತು ೨೦೨೨ ರ ಮತದಾರರ ಯಾದಿಗಳನ್ನು ಆದಾರ ವಾಗಿಟ್ಟು ಕೊಂಡು ಮಹಿಳಾ ಕ್ಷೇತ್ರಗಳನ್ನು ಗುರುತಿಸುವುದು ಅಷ್ಟೇನೂ ಕಷದ ಕೆಲಸ ಆಗಿರಲಿಲ್ಲ. ಇನ್ನುಮುಂದಾದರೂ ಈ ಮಸೂದೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ನಿಗದಿತ ಸಮಯ ನಿಗದಿ ಮಾಡುವ ಕಾನೂನು ಪ್ರಕ್ರಿಯೆ ಪ್ರಾರಂಭಿಸಬೇಕಾಗಿದೆ. ಇದರ ಜೊತೆಗೆ ಮಹಿಳಾ ಮೀಸಲಾತಿಯ ಸಂಪೂರ್ಣ ಪ್ರಯೋಜನದ ಪೂರ್ಣ ಪಲ ಎಲ್ಲಾ ಪಲಾನುಬಾವಿಗಳಿಗೆ ದೊರೆಯಬೇಕಾದರೆ ಒಬಿಸಿ ಯಲ್ಲಿ ಒಳಮೀಸಲಾತಿ ಘೋಸಿಸಬೇಕಾಗುತ್ತದೆ. ಇಲ್ಲದಿದ್ದರೆ ದಶಕಗಳ ಕಾಲ ಈ ಮಸೂದೆ ಕಾರ್ಯಗತವಾಗಲಾರದು ಎಂದಿದ್ದಾರೆ.